ಯುದ್ದ ವಿಮಾನ ಪತನ ಪೈಲೆಟ್ ಸುರಕ್ಷಿತ
ಬಾರ್ಮರ್,ಸೆ.೩-ಭಾರತೀಯ ವಾಯುಪಡೆಯ ಮಿಗ್-೨೯ ಯುದ್ಧ ವಿಮಾನವು ತಾಂತ್ರಿಕ ದೋಷದಿಂದ ಸೋಮವಾರ ರಾಜಸ್ಥಾನದ ಬಾರ್ಮರ್ ಬಳಿ ಪತನಗೊಂಡಿದೆ. ಪೈಲಟ್ ಸುರಕ್ಷಿತವಾಗಿದ್ದು, ಯಾವುದೇ ಪ್ರಾಣ ಅಥವಾ ಆಸ್ತಿ ನಷ್ಟ ಸಂಭವಿಸಿಲ್ಲ ಎಂದು ವಾಯುಪಡೆ ತಿಳಿಸಿದೆ.
ನಿಯಮಿತ ಅಭ್ಯಾಸದ ವೇಳೆ ಈ ಅವಘಡ ಸಂಭವಿಸಿದೆ. ಅಪಘಾತದ ಬಗ್ಗೆ ಮಾಹಿತಿ ಬಂದ ತಕ್ಷಣ ನಾಗನ ಪೊಲೀಸ್ ಠಾಣೆ ಹಾಗೂ ವಾಯುಪಡೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಅಪಘಾತದ ನಂತರ, ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಮತ್ತು ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಧಾವಿಸಿವೆ.
ಆದರೆ, ಈ ದುರ್ಘಟನೆ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ವಾಯುಪಡೆ ತಿಳಿಸಿದೆ. ಜನವಸತಿ ಪ್ರದೇಶದಿಂದ ಯುದ್ಧ ವಿಮಾನ ಪತನಗೊಂಡಿದೆ. ಸೋಮವಾರ ರಾತ್ರಿ ೧೦ ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.