ಗರ್ಭಧಾರಣೆಯ ಫೋಟೋ ಹಂಚಿಕೊಂಡ ದೀಪಿಕಾ
ಮುಂಬೈ,ಸೆ.೩-ಸದ್ಯದಲ್ಲೇ ತಾಯಿಯಾಗಲಿರುವ ನಟಿ ದೀಪಿಕಾ ಪಡುಕೋಣೆ ತಮ್ಮ ಗರ್ಭಧಾರಣೆಯ ಫೋಟೋಶೂಟ್‌ನ ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಟಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ೧೪ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಈ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ, ದೀಪಿಕಾ, ತನ್ನ ಗರ್ಭಧಾರಣೆಯನ್ನು ನಕಲಿ ಎಂದು ಜಾಲತಾಣದಲ್ಲಿ ಆರೋಪ ಮಾಡುತ್ತಿದ್ದ,ಸದಾ ಟೀಕಿಸುವ ಜನರಿಗೆ ಬಾಯಿ ತೆರೆಯದ ರೀತಿಯಲ್ಲಿ ಉತ್ತರಿಸಿದ್ದಾರೆ. ನಟಿಯಯು ದಿನಾಂಕ ಸೆಪ್ಟೆಂಬರ್ ೨೮ ಮಗುವಿಗೆ ಜನ್ಮ ನೀಡಬಹುದು ಎನ್ನಲಾಗಿದೆ.
ಅವರು ಹಂಚಿಕೊಂಡ ಚಿತ್ರಗಳಲ್ಲಿ, ಪತಿ ರಣವೀರ್ ಸಿಂಗ್ ಸಹ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ದೀಪಿಕಾ ಅವರ ಸಹೋದರಿ ಅನಿಶಾ ಪಡುಕೋಣೆ ಅಲ್ಲದೆ, ಬಿಪಾಶಾ ಬಸು, ಅದಿತಿ ರಾವ್ ಹೈದರಿ, ಧನಶ್ರೀ ವರ್ಮಾ, ಓರಿ ಮತ್ತು ಬಿ ಪ್ರಾಕ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಫೋಟೋಗಳಿಗೆ ಪ್ರತಿಕ್ರಿಯಿಸಿದ್ದಾರೆ.
ದೀಪಿಕಾ ಪಡುಕೋಣೆ ೨೦೧೮ ರಲ್ಲಿ ರಣವೀರ್ ಸಿಂಗ್ ಅವರನ್ನು ವಿವಾಹವಾದರು. ಇವರಿಬ್ಬರೂ ಮೊದಲು ಭೇಟಿಯಾದದ್ದು ಗೋಲಿಯೋನ್ ಕಿ ರಾಸ್ಲೀಲಾ ರಾಮಲೀಲಾ ಚಿತ್ರದ ಸೆಟ್‌ನಲ್ಲಿ. ಒಟ್ಟಿಗೆ ಕೆಲಸ ಮಾಡುವಾಗ, ಇಬ್ಬರೂ ಪ್ರೀತಿಸುತ್ತಿದ್ದರು ಮತ್ತು ೫ ವರ್ಷಗಳ ಸಂಬಂಧದ ನಂತರ ಇಬ್ಬರೂ ಮದುವೆಯಾದರು.
ಗೋಲಿಯೋನ್ ಕಿ ರಾಸ್ಲೀಲಾ: ರಾಮಲೀಲಾ ಪದ್ಮಾವತ್’, ಬಾಜಿರಾವ್ ಮಸ್ತಾನ್ ಮತ್ತು ೮೩ ಚಿತ್ರದಲ್ಲಿ ದೀಪಿಕಾ ಮತ್ತು ರಣವೀರ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ರಣವೀರ್ ಅಭಿನಯದ ಸರ್ಕಸ್ ಚಿತ್ರದಲ್ಲಿಯೂ ದೀಪಿಕಾ ಅತಿಥಿ ಪಾತ್ರ ಮಾಡಿದ್ದಾರೆ.