ಒತ್ತೆಯಾಳುಗಳ ಸಾವು: ಇಸ್ರೇಲ್‌ನಲ್ಲಿ ಭಾರಿ ಪ್ರತಿಭಟನೆ
ಟೆಲ್ ಅವೀವಾ,ಸೆ.೩- ಗಾಜಾದಲ್ಲಿ ಒತ್ತೆಯಾಳುಗಳಾಗಿದ್ದ ಮಂದಿಯಲ್ಲಿ ಸುರಕ್ಷಿತವಾಗಿ ಕರೆತರಲು ಸಾಧ್ಯವಾಗದೆ ೬ ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು ಒತ್ತೆಯಾಳುಗಳ ಸಾವಿನ ಬಗ್ಗೆ ಪ್ರಧಾನಿ ಬೆಂಜಮಿನ್ ನೇತಾಹ್ಯಾಹು ಕ್ಷಮೆ ಕೇಳಿದ್ದಾರೆ
ಕದನ ವಿರಾಮ ಘೋಷಿಸಿದ್ದರೆ ಒತ್ತೆಯಾಳುಗಳು ಸುರಕ್ಷಿತವಾಗಿ ಹಿಂದಿರುಗುತ್ತಿದ್ದರು ಎಂದು ಹಮಾಸ್ ಬಂಡುಕೋರರು ಹೇಳಿದ ಬೆನ್ನಲ್ಲೇ ಒತ್ತೆಯಾಳು ಬಿಡಿಸಿಕೊಂಡು ಬರಲು ಸಾಧ್ಯವಾಗದಕ್ಕೆ ಕ್ಷಮೆ ಇರಲಿ ಎಂದಿದ್ದಾರೆ.
ಈ ನಡುವೆ ರಾಜಧಾನಿ ಟೆಲ್ ಅವೀವಾ ಸೇರಿದಂತೆ ಮತ್ತಿತರ ಕಡೆ ಸಹಸ್ರಾರು ಮಂದಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಎರಡನೇ ದಿನವೂ ಕೂಡ ಪ್ರತಿಭಟನೆ ಮುಂದುವರಿದಿವೆ
ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಲು ಉಪಕರಣಗಳನ್ನು ಬಳಸುವ ಅಪಾಯವನ್ನು ಉಲ್ಲೇಖಿಸಿ ಅಮೇರಿಕಾ ಇಸ್ರೇಲ್‌ಗೆ ಕೆಲವು ಶಸ್ತ್ರಾಸ್ತ್ರಗಳ ಮಾರಾಟ ಸ್ಥಗಿತಗೊಳಿಸಿದ್ದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಒತ್ತಡ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಗಾಜಾದ ಫಿಲಡೆಲ್ಫಿ ಕಾರಿಡಾರ್ ಅನ್ನು ನಿಯಂತ್ರಿಸಬೇಕು.ಹಮಾಸ್‌ನೊಂದಿಗಿನ ಮಾತುಕತೆ ನಡೆಸಿ ಕದನ ವಿರಾಮ ಘೋಷಿಸಲು ಮುಂದಾಗಬೇಕು ಎಂದು ಅಮೆರಿಕಾ ಸಲಹೆ ನೀಡಿದೆ
ಜೆರುಸಲೆಮ್‌ನಲ್ಲಿನ ಪ್ರಧಾನ ಮಂತ್ರಿಯ ಮನೆಯ ಹೊರಗೆ ನಡೆದ ಪ್ರತಿಭಟನೆಯಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಆಕ್ರಮಣ ಪ್ರಯೋಗಿಸಿದ್ದರಿಂದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ.
ಟೆಲ್ ಅವಿವ್‌ನಲ್ಲಿ ಕೆಲವು ಪ್ರತಿಭಟನಾಕಾರರು ಪ್ರಮುಖ ಹೆದ್ದಾರಿಯನ್ನು ನಿರ್ಬಂಧಿಸುವುದರೊಂದಿಗೆ ದೇಶಾದ್ಯಂತ ಪ್ರತಿಭಟನೆಗಳಲ್ಲಿ ನೂರಾರು ಸಾವಿರ ಜನರು ಬೀದಿಗಿಳಿದು ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ೭ ರಂದು ಹಮಾಸ್‌ನಿಂದ ಅಪಹರಿಸಿದ ನಂತರ ಒಟ್ಟು ೯೭ ಒತ್ತೆಯಾಳುಗಳು ಪತ್ತೆಯಾಗಿಲ್ಲ ಒತ್ತೆಯಾಳುಗಳ ಪೈಕಿ ೬ ಮಂದಿ ಸಾವನ್ನಪ್ಪಿರುವುದು ಹಮಾಸ್ ಮತ್ತು ಇಸ್ರೇಲ್ ಸೇನೆಯ ನಡುವೆ ಬಿಗುವಿನ ವಾತಾವರಣಕ್ಕೆ ಕಾರಣವಾಗಿದೆ.