ದಾಂತೇವಾಡದಲ್ಲಿ 36 ನಕ್ಸಲರು ಎನ್ ಕೌಂಟರ್ ಗೆ ಬಲಿ‌: ಅಪಾರ ಪ್ರಮಾಣ ಶಸ್ತ್ರಾಸ್ತ್ರ ವಶ
ರಾಯ್ ಪುರ, ಅ.4– ಛತ್ತೀಸ್‌ಗಢದ ನಾರಾಯಣಪುರ-ದಂತೇವಾಡ ಗಡಿಯ ಅರಣ್ಯದಲ್ಲಿ ಮಾವೋವಾದಿಗಳೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳು 36 ಮಂದಿ ನಕ್ಸಲರನ್ನು ಹತ್ಯೆ ಮಾಡಿದ್ದಾರೆ.
ಇತ್ತೀಚಿನ ವರ್ಷದಲ್ಲಿ ಭದ್ರತಾ ಪಡೆಗಳಿಗೆ ಸಿಕ್ಕ ಅತೊದೊಡ್ಡ ಯಶಸ್ಸು ಎಂದು ‌ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮಾವೋವಾದಿ ವಿರೋಧಿ ಕಾರ್ಯಾಚರಣೆ ಪ್ರಾರಂಭಿಸಿದ್ದು, ಇಂದು ಮಧ್ಯಾಹ್ನ 12.30 ರ ವೇಳೆಗೆ 36 ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ.
ಘಟನಾ ಸ್ಥಳದಲ್ಲಿ ಎಕೆ 47 ಸೇರಿದಂತೆ ಇತರ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಸೇರಿದಂತೆ ಹಲವಾರು ಆಕ್ರಮಣಕಾರಿ ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾವೋವಾದಿಗಳ ದೊಡ್ಡ ಉಪಸ್ಥಿತಿಯ ಗುಪ್ತಚರ ವರದಿಗಳ ನಂತರ, ಜಂಟಿ ಕಾರ್ಯಾಚರಣೆಯಲ್ಲಿ ಪ್ರತ್ಯೇಕ ತಂಡಗಳನ್ನು ನಿನ್ನೆಯಿಂದ ಓರ್ಚಾ ಮತ್ತು ಬಾರ್ಸೂರು ಪೊಲೀಸ್ ಠಾಣೆ ವ್ಯಾಪ್ತಿಯ ಗೋವೆಲ್, ನೆಂದೂರು ಮತ್ತು ತುಳುತುಳಿ ಗ್ರಾಮಗಳಲ್ಲಿನ ಕಾರ್ಯಾಚರಣೆ ನಡೆಸಿದ್ದರು.
.
ನೆಂದೂರು-ತುಳತುಳಿ ಸಮೀಪದ ಅರಣ್ಯದಲ್ಲಿ ಮಧ್ಯಾಹ್ನ ಎನ್‌ಕೌಂಟರ್‌ ನಡೆದಿದೆ. ಭದ್ರತಾ ಪಡೆಗಳು ಕಾಡಿನೊಳಗೆ ಇನ್ನೂ ನಕ್ಸಲರು ಇರಬಹುದು ಎನ್ನುವ ಮಾಹಿತಿ ಆಧರಿಸಿ ಶೋಧ ನಡೆಸಿವೆ ಎಂದು ಹೇಳಲಾಗಿದೆ.
ಈ ಎನ್‌ಕೌಂಟರ್ ಛತ್ತೀಸ್‌ಗಢದಲ್ಲಿ ಮಾವೋವಾದಿ ದಂಗೆಯ ವಿರುದ್ಧದ ಹೋರಾಟದಲ್ಲಿ ಭದ್ರತಾ ಪಡೆಗಳಿಗೆ ಒಂದು ದೊಡ್ಡ ಯಶಸ್ಸು ಇದಾಗಿದೆ.
