ಆಸ್ಪತ್ರೆಯಿಂದ ನಟ ರಜಿನಿಕಾಂತ್ ಡಿಸ್ಚಾರ್ಜ್
ಚೆನ್ನೈ. ಅ.೪- ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್‌ಸ್ಟಾರ್ ರಜನೀಕಾಂತ್ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರೆಳಿದ್ದಾರೆ.
ತಲೈವಾ ಚೇತರಿಸಿಕೊಂಡಿದ್ದು ಅಭಿಮಾನಿಗಳಿಗೆ ಇನ್ನಿಲ್ಲದ ಖುಷಿ ನೀಡಿದೆ.
ರಜನಿಕಾಂತ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ವೈದ್ಯರು ಯಾವ ತೊಂದರೆಯೂ ಇಲ್ಲ ಎಂದು ಭರವಸೆ ನೀಡಿರುವುದಾಗಿ
ತಿಳಿದು ಬಂದಿದೆ.
ಸೆ.೩೦ರಂದು ಶೂಟಿಂಗ್ ವೇಳೆ ರಜನಿಕಾಂತ್ ಅಸ್ವಸ್ಥರಾಗಿ ಇಲ್ಲಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯದ ಮುಖ್ಯ ರಕ್ತನಾಳದಲ್ಲಿ ಊತ ಕಂಡುಬಂದಿದ್ದರಿಂದ
ಟ್ರಾನ್ಸ್‌ಕ್ಯಾಥೆಟರ್ ಚಿಕಿತ್ಸಾ ವಿಧಾನದಿಂದ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸದ್ಯ ರಜನಿಕಾಂತ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ವೆಟ್ಟಯ್ಯನ್ ಅ.೧೦ರಂದು ಬಿಡುಗಡೆಯಾಗಲಿದೆ.