ತುಳಸಿಮತಿಗೆ ಬೆಳ್ಳಿ, ಮನೀಶಾಗೆ ಕಂಚು
ಪ್ಯಾರಿಸ್, ಸೆ.2- ಭಾರತದ ಶಟ್ಲರ್‍ಗಳಾದ ತುಳಸಿಮತಿ ಮುರಗಸೇನ್ ಮತ್ತು ಮನೀಶಾ ರಾಮ್‍ದಾಸ್ ಪ್ಯಾರಾಲಿಂಪಿಕ್ಸ್‍ನಲ್ಲಿ ಕ್ರಮವಾಗಿ ಚೊಚ್ಚಲ ಬೆಳ್ಳಿ ಮತ್ತು ಕಂಚು ಗೆದ್ದಿದ್ದಾರೆ. ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‍ನಲ್ಲಿ ಬೆಳ್ಳಿ ಮತ್ತು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
22 ವರ್ಷದ ತುಳಸಿಮತಿ ಮಹಿಳಾ ಸಿಂಗಲ್ಸ್‍ನ ಎಸ್‍ಯು5 ವಿಭಾಗದ ಫೈನಲ್‍ನಲ್ಲಿ ಚೀನಾ ಹಾಲಿ ಚಾಂಪಿಯನ್ ಯಾಂಗ್ ಕ್ವಿಕ್ಸಿಯಾ ವಿರುದ್ಧ 17-21, 10-21 ಅಂಕಗಳಿಂದ ಸೋತರು.
ಎರಡನೆ ಸೀಡ್ ಆಗಿದ್ದ ಮನೀಶ ಕಂಚಿಗಾಗಿ ನಡೆದ ಕಾದಾಟದಲ್ಲಿ ಡೆನ್‍ಮಾರ್ಕ್‍ನ ಕ್ಯಾಥರಿನ್ ರೊಸೆನ್‍ಗ್ರೆನ್ ವಿರುದ್ಧ 21-12, 21-8 ಅಂಕಗಳಿಂದ ಗೆದ್ದು ಕಂಚಿಗೆ ಕೊರೊಳೊಡ್ಡಿದರು.
ಇದಕ್ಕೂ ಮುನ್ನ ಸೆಮಿಫೈನಲ್‍ನಲ್ಲಿ ತುಳಸಿಮತಿ ಮುಗಸೇನ್ ಸಹ ಆಟಗಾರ್ತಿ ಮನೀಶಾ ರಾಮ್‍ದಾಸ್ ವಿರುದ್ಧ 40 ನಿಮಿಷ ಹೋರಾಡಿ 23-21, 21-17 ಅಂಕಗಳಿಂದ ಗೆದ್ದರು.
ಮೊದಲ ಸೆಟ್‍ನಲ್ಲಿ ಮನೀಶಾ ಅವಕಾಶಗಳನ್ನು ಸೃಷ್ಟಿಸಿಕೊಂಡರೂ ಅವಕಾಶವನ್ನು ಬಳಸಿಕೊಳ್ಳದೇ ಸೋತರು. ಎರಡನೆ ಸೆಟ್‍ನಲ್ಲಿ ಮನೀಶಾ ಮುನ್ನಡೆ ಪಡೆದು ನಂತರ ತಪ್ಪುಗಳನ್ನು ಮಾಡಿ 17-21 ಅಂಕಗಳಿಂದ ಮಣಿದರು.