ಕಾವಡಾ ಯಾತ್ರೆ ವೇಳೆ ಮಹಿಳೆಗೆ ದೈವ ಆಹ್ವಾಹನೆ..
ಬೀದರ್, ಸೆ. ೨- ಕೊನೆಯ ಶ್ರಾವಣ ಸೋಮವಾರ ನಿಮಿತ್ತ ನಡೆದ ಪಾದಯಾತ್ರೆ ವೇಳೆ ಘಟನೆ.
ಪ್ರತಿ ವರ್ಷ ಶ್ರಾವಣ ಮಾಸದ ಪ್ರತಿ ಸೋಮವಾರ ನಡೆಯುವ ಪಾದಯಾತ್ರೆ.
ಭಾಲ್ಕಿ ತಾಲೂಕಿನ ಗಾಯಮುಖ ದೇವಸ್ಥಾನದಿಂದ ಬೀದರ್ ನಗರದ ಪಾಪನಾಶ ದೇವಸ್ಥಾನದವರೆಗೆ ಪಾದಯಾತ್ರೆ.
ಕಾವಡಾ ಯಾತ್ರೆ ಹಿನ್ನೆಲೆ ಪವಿತ್ರ ಜಲಹೊತ್ತು ಭಕ್ತರಿಂದ ಪಾದಯಾತ್ರೆ.
ಗಾಯಮುಖ ದೇವಸ್ಥಾನದಲ್ಲಿ ಮಡಿ ಸ್ನಾನ ಮಾಡಿ, ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭ.
ಗಾಯಮುಖ ದೇವಸ್ಥಾನದಿಂದ ಆರಂಭವಾದ ಪಾದಯಾತ್ರೆಯಲ್ಲಿ ನೂರಾರು ಭಕ್ತರು ಭಾಗಿ.
ಪಾದಯಾತ್ರೆ ವೇಳೆ ಗಮನಸೆಳೆದ ಶಿವ-ಪಾರ್ವತಿ ವೇಷಧಾರಿ ಮಕ್ಕಳು.
ವಿಶೇಷ ಜಲ ತುಂಬಿದ ಬಿಂದಿಗೆಗಳನ್ನ ಹೆಗಲ ಮೇಲೆ ಹೊತ್ತು ಸಾಗಿದ ಭಕ್ತರು.
ಭಾಲ್ಕಿ ಟು ಬೀದರ್ ಹೆದ್ದಾರಿಯುದ್ದಕ್ಕೂ ಹೆಜ್ಜೆ ಹಾಕುತ್ತಾ ಸಾಗಿದ ಭಕ್ತರು.
ಪಾದಯಾತ್ರೆ ಮುಕ್ತಾಯದ ಬಳಿಕ ಪಾಪನಾಶ ದೇವಸ್ಥಾನದಲ್ಲಿ ಅಭಿಷೇಕ ಮಾಡಿ ಪೂಜೆ.
