ಮುಡಾ ಹಗರಣ; ಸಿಎಂ ಸದ್ಯಕ್ಕೆ ನಿರಾಳ:ಸೆ.9ಕ್ಕೆ ವಿಚಾರಣೆ ಮುಂದೂಡಿಕೆ
ಬೆಂಗಳೂರು, ಸೆ.2: ಮುಡಾ ಹಗರಣ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ವಾರ ತಾತ್ಕಾಲಿಕ ರಿಲಿಫ್ ಸಿಕ್ಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸೆ.9 ಮಧ್ಯಾಹ್ನ 2.30 ನ್ಯಾಯಾಧೀಶರು ಮುಂದೂಡಿದ್ದಾರೆ.
ಕಳೆದ ವಿಚಾರಣೆಯಲ್ಲಿ ರಾಜ್ಯಪಾಲರ ಪರವಾಗಿ ವಕೀಲ ತುಷಾರ್ಲ ಮೆಹ್ತಾ , ಸ್ನೇಹಮಯಿ‌ಕೃಷ್ಣ ಪರ ಹಿರಿಯ ವಕೀಲ‌ ಮಣೀಂಧರ್ ಸಿಂಗ್ ಹಾಗೂ ಪ್ರದೀಪ್‌ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಅಬ್ರಹಾಂ ಪರ ವಕೀಲ ರಂಗನಾಥ ರೆಡ್ಡಿ ವಾದ ಮಂಡಿಸಿದ್ದರು.
ಇಂದು‌ ನ್ಯಾಯಮೂರ್ತಿ ನಾಗಪ್ರಸನ್ನ ಪೀಠದ ಮುಂದೆ ವಿಚಾರಣೆ ಮುಂದುವರಿಯಿತು.
ಈ ಹಗರಣ ಕೇವಲ ಇಬ್ಬರ ನಡುವಿನ ಪ್ರಕರಣವಲ್ಲ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ್ದಾಗಿದೆ. ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 17ಎ ಅಡಿ ಪ್ರಾಸಿಕ್ಯೂಷನ್‌ಗೆ ಕೋರುವ ಅಗತ್ಯವಿಲ್ಲ. ಆದರೂ ಅನುಮತಿ ಕೋರಲಾಗಿದೆ. ಅರ್ಜಿದಾರರ ವಿರುದ್ಧ ಯಾವುದೇ ಆರೋಪ ಇಲ್ಲವಾದಲ್ಲಿ ಈ ಪ್ರಕ್ರಿಯೆ ಅಗತ್ಯವೇ ಇರುವುದಿಲ್ಲ ಎಂದರು.
ಪ್ರಕರಣವನ್ನು ಸಾರ್ವಜನಿಕ ವಿಶ್ವಾರ್ಹತೆಯ ದೃಷ್ಠಿಯಿಂದ ಪರಿಗಣಿಸಬೇಕು. ಸಾರ್ವಜನಿಕ ಸೇವಕರಾಗಿರುವ ಸಂದರ್ಭದಲ್ಲಿ ಅವರು ನೇರವಾಗಿ ಭಾಗಿಯಾಗದ್ದಿದ್ದರೂ, ಭ್ರಷ್ಟಚಾರ ನಿಗ್ರಹ ಕಾಯಿದೆ ಸೆಕ್ಷನ್ 17ಎ ಅನ್ವಯವಾಗಲಿದೆ.
ಮೈಲಾರಯ್ಯ ಅವರಿಗೆ ದೇವರಾಜ ಮತ್ತು ಅವರ ಸಹೋದರರು ಅದೇ ಜಮೀನನ್ನು ಮಾರಾಟ ಮಾಡಿದ್ದರು. ಈ ಪ್ರಕ್ರಿಯೆಯಲ್ಲಿ ಮಾಲೀಕತ್ವದ ಹಕ್ಕು ಬದಲಾಗಿದೆ. ಈ ನಡುವೆ ದೇವರಾಜು ಎಂಬುವರು ಅದೇ ಜಮೀನನ್ನು ಡಿನೋಟಿಫಿಕೇಷನ್‌ಗೆ ಕೋರಿರುತ್ತಾರೆ. ಆದರೆ, ಸಿದ್ದರಾಮಯ್ಯ ಅವರ ಬಾವಮೈದುನ(ಪತ್ನಿಯ ಸಹೋದರ)ಗೆ ಮಾರಾಟ ಮಾಡಿದ್ದಾರೆ. ಈಗಾಗಲೇ ಮೂಡಾ ಈ ಜಮೀನನ್ನು ನೋಟಿಫಿಕೇಷನ್ ಮಾಡಿತ್ತು. ನೋಟಿಫಿಕೇಷನ್ ಆದ ನಂತರ ಯಾವ ಆಧಾರದಲ್ಲಿ ಮಾರಾಟ ಮಾಡುತ್ತಾರೆ ಎಂಬುದು ಸಂಶಯಕ್ಕೆ ಕಾರಣವಾಗಿದೆ ಎಂದು ಹೇಳಿದರು.
,ಮುಡಾಪ್ರಕರಣ ಸಂಬಂಧ ಸರ್ಕಾರ ನ್ಯಾಯಾಂಗ ತನಿಖೆಗೆ ವಹಿಸಿದೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರಾದ ಮುಖ್ಯಮಂತ್ರಿ ಆರೋಪ ಮುಕ್ತರಾಗಬಹುದಾಗಿದೆ. 1998-99ರಲ್ಲಿ ಅರ್ಜಿದಾರರು ಉಪ ಮುಖ್ಯಮಂತ್ರಿಯಾಗಿದ್ದರು. 2013ರಿಂದ 18ರವರೆಗೆ ಸಿಎಂ ಆಗಿದ್ದರು, ಇದೀಗ 2024ರರಿಂದ ಮತ್ತೆ ಸಿಎಂ ಆಗಿದ್ದಾರೆ ಎಂದು ವಾದ ಮಂಡಿಸಿದರು. ಬಳಿಕ ನ್ಯಾಯಾಧೀಶರಿ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದರು.