ಪಿಡಿಪಿ ನಾಲ್ಕನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಶ್ರೀನಗರ,ಸೆ.೨- ಮೆಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಿಡಿಪಿ ಈ ಪಟ್ಟಿಯಲ್ಲಿ ೬ ಹೊಸ ಹೆಸರುಗಳನ್ನು ಪ್ರಕಟಿಸಿದೆ. ಬಿಡುಗಡೆಯಾದ ಅಧಿಸೂಚನೆಯ ಪ್ರಕಾರ, ಪಕ್ಷವು ನಾಲ್ಕನೇ ಹಂತದ ಅಭ್ಯರ್ಥಿಗಳನ್ನು ಘೋಷಿಸಿದೆ.
ಪಕ್ಷವು ಇದುವರೆಗೆ ೩೪ ಅಭ್ಯರ್ಥಿಗಳನ್ನು ಘೋಷಿಸಿದೆ.
ಪಿಡಿಪಿಯ ನಾಲ್ಕನೇ ಪಟ್ಟಿಯಲ್ಲಿ ೬ ಹೆಸರುಗಳಿವೆ. ಇದರಲ್ಲಿ ಬೀರ್ವಾದಿಂದ ಹಾಜಿ ಜಿ ಅಹ್ಮದ್ ,ಖನ್ಯಾರ್ ದಿಂದ ತಫಾಜುಲ್ ಮುಷ್ತಾಕ್ ತ್ರೆಹಗಾಮ್: ಮೊಹಮ್ಮದ್ ಅಫ್ಜಲ್ ವಾನಿ,ಸೋನಾವರಿಯಿಂದ ತಾಹಿರ್ ಖಾದ್ರಿ ರಫಿಯಾಬಾದ್ ದಿಂದ ಅಲ್ತಾಫ್ ಅಹ್ಮದ್ ಮಲಿಕ್, ಹಂದ್ವಾರದಿಂದ ಮೀರ್ ಆಜಾದ್ ಪರ್ವಾಜ್ ಹೆಸರು ಘೋಷಣೆ ಮಾಡಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ೯೦ ಸದಸ್ಯರನ್ನು ಆಯ್ಕೆ ಮಾಡಲು ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಸೆಪ್ಟೆಂಬರ್ ೧೮, ಸೆಪ್ಟೆಂಬರ್ ೨೫, ಮತ್ತು ಅಕ್ಟೋಬರ್ ೧ ರಂದು ಚುನಾವಣೆಗಳು ನಡೆಯಲಿವೆ. ಅಕ್ಟೋಬರ್ ೮ ರಂದು ಮತದಾನದ ಫಲಿತಾಂಶ ಪ್ರಕಟವಾಗಲಿದೆ.