ಮದುವೆ ಮಂಟಪದಲ್ಲಿ ಕುಸಿದು ಬಿದ್ದು ಮದುಮಗ ಸಾವು
ವಾಡಿ,ಸೆ 2: ಮದುವೆ ಮಂಟಪದಲಿ ಕುಸಿದು ಬಿದ್ದು ಮದುಮಗ ಸಾವನ್ನಪ್ಪಿದ ಘಟನೆ ವಾಡಿ ಪಟ್ಟಣದಲ್ಲಿ ನಡೆದಿದೆ.
ರಾಜೇಂದ್ರ (ಸನ್ನಿ) ಜಾವಿಂದ್ರ ಸಿಂಗ್ ವಾಲಿಯ( 36) ಮೃತ ಪಟ್ಟ ಮದುಮಗ.
ವಾಡಿ ಪಟ್ಟಣದ ಪಿಲಕಮ್ಮಾ ಬಡಾವಣೆಯ ನಿವಾಸಿ ರಾಜೇಂದ್ರ (ಸನ್ನಿ) ಮದುವೆಯಾಗಿ ಮೆರವಣಿಗೆ ಮೂಲಕ ಮನೆಗೆ ಅಗಮಿಸಿದ ನಂತರ ಪ್ರಜ್ಞೆ ತಪ್ಪಿದ್ದರು.ತಕ್ಷಣ ಕಲಬುರಗಿ ಆಸ್ಪತ್ರೆಗೆ ಸೇರಿಸಲಾಯಿತು.ನಂತರ ಸೊಲ್ಲಾಪುರಕ್ಕೆ ಸಾಗಿಸಿ ಅಲ್ಲಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಕೊಡಿಸಿದರು.
ಸುಮಾರು ಹದಿನೈದು ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಾಜೇಂದ್ರ ಚಿಕಿತ್ಸೆಗೆ ಸ್ಪಂದಿಸದೇ ರವಿವಾರ ಬೆಳಗಿನ ಜಾವ 2 ಗಂಟೆಗೆ ಕೊನೆಯುಸಿರೆಳೆದರು.ಮದುವೆಯಾದ ಕೆಲವೆ ಗಂಟೆಗಳಿಲ್ಲಿ ಆಸ್ಪತ್ರೆ ಸೇರಿ ಸಾವನಪ್ಪಿದ ನತದೃಷ್ಟ ರಾಜೇಂದ್ರನ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.
ರಾಜೇಂದ್ರ ನ ತಂದೆ ಒಂದು ವರ್ಷದ ಹಿಂದೆ ಪತ್ನಿ ಯನ್ನು ಈಗ ಮಗನನ್ನು ಕಳೆದುಕೊಂಡ ಗೋಳಾಡುತ್ತಿರುವ ದೃಶ್ಯ ಮನ ಕುಲಕುವಂತಿತ್ತು.