ಬಿಗ್ ಬಿ ಮೊಮ್ಮಗಳು ಐಐಎಂಗೆ ಪ್ರವೇಶ
ಅಹಮದಾಬಾದ್,ಸೆ.೨-ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ವೃತ್ತಿಜೀವನ ಬದಲು, ನವ್ಯಾ ತನಗಾಗಿ ವಿಭಿನ್ನ ವೃತ್ತಿಯನ್ನು ಆರಿಸಿಕೊಂಡಿದ್ದಾಳೆ. ನವ್ಯಾ ತನ್ನ ತಂದೆಯಂತೆ ಪ್ರಸಿದ್ಧ ಉದ್ಯಮಿಯಾಗಲು ಬಯಸಿದ್ದಾಳೆ.
ನವ್ಯಾ ಅಹಮದಾಬಾದ್‌ನ ದೇಶದ ಪ್ರಸಿದ್ಧ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ಗೆ ಪ್ರವೇಶ ಪಡೆಯುವ ಕನಸನ್ನು ವ್ಯಕ್ತಪಡಿಸಿದ್ದಳು, ಅದನ್ನು ಈಗ ಈಡೇರಿಸಿ ಕೊಂಡಿದ್ದಾಳೆ.
ನವ್ಯಾ ನವೇಲಿ ನಂದಾ ಇನ್‌ಸ್ಟಾಗ್ರಾಂನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾಳೆ. ಇದರಲ್ಲಿ ಐಐಎಂ ಅಹಮದಾಬಾದ್ ನಲ್ಲಿ ಪ್ರವೇಶ ಪಡೆಯುವ ಬಗ್ಗೆ ಮಾಹಿತಿ ನೀಡಿದ್ದಾಳೆ. ಫೋಟೋಗಳ ಶೀರ್ಷಿಕೆಯಲ್ಲಿ, ನವ್ಯಾ ಕನಸುಗಳು ನನಸಾಗುತ್ತವೆ ಎಂದು ಬರೆದುಕೊಂಡಿದ್ದಾಳೆ. ಇದರೊಂದಿಗೆ, ನವ್ಯಾ ಅವರು ೨೦೨೬ ರವರೆಗೆ ಈ ಸಂಸ್ಥೆಯಲ್ಲಿ ಅಧ್ಯಯನ ಮಾಡುವುದಾಗಿ ಹೇಳಿದ್ದಾರೆ.
ಜಾಲತಾಣದಲ್ಲಿ ಅನೇಕ ಬಾಲಿವುಡ್ ತಾರೆಗಳು, ಅಭಿಮಾನಿಗಳು ನವ್ಯಾ ನವೇಲಿಗೆ ಶುಭಾಶಯ ಕೋರಿದ್ದಾರೆ.