ರಷ್ಯನ್ ಸ್ಟೈ ವೇಲ್ ಇನ್ನಿಲ್ಲ
ಮಾಸ್ಕೋ,ಸೆ.೨-ರಷ್ಯಾದ ಬೇಹುಗಾರ ತಿಮಿಂಗಿಲ ಹ್ವಾಲ್ಡಿಮಿರ್ ನಾರ್ವೆ ಕರಾವಳಿಯಲ್ಲಿ ಶವವಾಗಿ ಪತ್ತೆಯಾಗಿದೆ. ತಿಮಿಂಗಿಲದ ಮೃತದೇಹವು ದಕ್ಷಿಣ ನಾರ್ವೆಯ ರಿಜವಿಕಾ ಕೊಲ್ಲಿಯಲ್ಲಿ ನೀರಿನ ಮೇಲೆ ತೇಲುತ್ತಿರುವುದನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ.ತಿಮಿಂಗಿಲ ದೇಹವನ್ನು ಕ್ರೇನ್ ಮೂಲಕ ಹೊರ ತೆಗೆಯಲಾಗಿದೆ.
ಈ ತಿಮಿಂಗಿಲ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತುಂಬಾ ಪ್ರಿಯವಾಗಿತ್ತು.ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹ್ವಾಲ್ಡಿಮಿರ್ ಡಿಟೆಕ್ಟಿವ್ ವೇಲ್ ಎಂದೇ ಗುರುತಿಸಲಾಗಿದೆ.ಹ್ವಾಲ್ಡಿಮಿರ್ ತಿಮಿಂಗಿಲವು ಪ್ರಾಣಿಗಳನ್ನು ಗೂಢಚಾರರನ್ನಾಗಿ ಮಾಡುವ ರಷ್ಯಾದ ಯೋಜನೆಯ ಭಾಗವಾಗಿತ್ತು ಎಂದು ಹೇಳಲಾಗುತ್ತದೆ. ಆದಾಗ್ಯೂ, ರಷ್ಯಾ ಈ ಸತ್ಯವನ್ನು ಬಹಿರಂಗವಾಗಿ ಒಪ್ಪಿಕೊಳ್ಳಲಿಲ್ಲ.
ವರದಿಗಳ ಪ್ರಕಾರ, ರಷ್ಯಾದ ಈ ಸ್ಪೈ ವೇಲ್‌ನ ದೇಹದಲ್ಲಿ ಕ್ಯಾಮೆರಾಗಳು ಮತ್ತು ಇತರ ಉಪಕರಣಗಳನ್ನು ಅಳವಡಿಸಲಾಗಿದೆ, ಅದರ ಮೂಲಕ ಯಾವುದೇ ಪ್ರದೇಶದ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆಯಬಹುದು. ಈ ತಿಮಿಂಗಿಲದಿಂದ ಸಮುದ್ರದ ಆಳದಲ್ಲಿ ನಡೆಯುವ ಘಟನೆಗಳ ಚಲನವಲನ ಸಹ ಸೆರೆಹಿಡಿಯಲು ಸಾಧ್ಯವಾಗಿದೆ. ಈ ತಿಮಿಂಗಿಲವು ಮನುಷ್ಯರೊಂದಿಗೆ ತುಂಬಾ ಆತ್ಮೀಯವಾಗಿ ವರ್ತಿಸುತ್ತಿದ್ದು ಎನ್ನಲಾಗಿದೆ.
ಈ ಹಿಂದೆ, ಓಸ್ಲೋ ಕರಾವಳಿಯ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ವರದಿಗಳ ಪ್ರಕಾರ, ಈ ತಿಮಿಂಗಿಲವು ಓಸ್ಲೋ ಫ್ಜೋರ್ಡ್‌ನ ಜನನಿಬಿಡ ಪ್ರದೇಶದಲ್ಲಿ ಕೊನೆಯದಾಗಿ ಕಂಡುಬಂದಿದೆ.