ಬಾಕಿ ಪ್ರಕರಣಗಳ ಇತ್ಯರ್ಥ ಭಾರತೀಯ ನ್ಯಾಯಾಂಗ ಸೇವೆ ಜಾರಿ ಅಗತ್ಯ
ನವದೆಹಲಿ,ಸೆ.೨- ದೇಶಾದ್ಯಂತ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಒತ್ತು ನೀಡಲು ಅಖಿಲ ಭಾರತ ನ್ಯಾಯಾಂಗ ಸೇವೆ ಜಾರಿಗೊಳಿಸುವ ಸಮಯ ಬಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.
ನ್ಯಾಯಾಂಗ ಅಧಿಕಾರಿಗಳಲ್ಲಿ ಶೇ. ೩೦ ರಷ್ಟಕ್ಕೂ ಹೆಚ್ಚು ಹುದ್ದೆ ಖಾಲಿ ಉಳಿದಿವೆ. ಖಾಲಿ ಹುದ್ದೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ನ್ಯಾಯಾಲಯಗಳು ಶೇಕಡಾ ೯೫ ರಷ್ಟು ವಿಲೇವಾರಿ ದರವನ್ನು ಸಾಧಿಸಿವೆ ಎಂದು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್‌ನ ೭೫ ವರ್ಷ ಆಚರಿಸುತ್ತಿರುವ ಸಮಯದಲ್ಲಿ ಜಿಲ್ಲಾ ನ್ಯಾಯಾಂಗ ಅಧಿಕಾರಿಗಳ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮುಖ್ಯನ್ಯಾಯಮೂರ್ತಿ ಅವರು “ನಮ್ಮ ಪ್ರಸ್ತುತ ರಾಷ್ಟ್ರೀಯ ಸರಾಸರಿ ವಿಲೇವಾರಿ ದರ ಶೇಕಡಾ ೯೫ ರಷ್ಟಿದೆ” ಎಂದು ಹೇಳಿದ್ದಾರೆ
ದೇಶದಲ್ಲಿ ೪.೫ ಕೋಟಿ ಪ್ರಕರಣಗಳ ದೈತ್ಯಾಕಾರದ ಬಾಕಿ ಇತ್ಯರ್ಥ ಮಾಡಲು ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ಬಾಕಿಯನ್ನು ಕಡಿಮೆ ಮಾಡಲು ಖಾಲಿ ಹುದ್ದೆಗಳ ತ್ವರಿತ ಭರ್ತಿಗಾಗಿ ಅಖಿಲ ಭಾರತ ನ್ಯಾಯಾಂಗ ಸೇವೆ ಜಾರಿ ಮಾಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ
“ಪ್ರಗತಿಯ ಹೊರತಾಗಿಯೂ, ಬಾಕಿ ಉಳಿದಿರುವ ಪ್ರಕರಣಗಳನ್ನು ನಿಭಾಯಿಸುವುದು ಒಂದು ಸವಾಲಾಗಿ ಉಳಿದಿದೆ. ನಮ್ಮ ವಿಲೇವಾರಿ ದಾಖಲೆ ಅನುಪಾತವನ್ನು ಹೆಚ್ಚಿಸುವುದು ನುರಿತ ಸಿಬ್ಬಂದಿಯನ್ನು ಆಕರ್ಷಿಸುವ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.
ಜಿಲ್ಲಾ ಮಟ್ಟದಲ್ಲಿ, ನ್ಯಾಯಾಂಗ ಸಿಬ್ಬಂದಿಗಳಲ್ಲಿ ಶೇಕಡಾ ೨೮ ರಷ್ಟು ಮತ್ತು ನ್ಯಾಯಾಂಗೇತರ ಸಿಬ್ಬಂದಿಗಳ ಖಾಲಿ ಹುದ್ದೆಗಳು ೨೭ ರಷ್ಟು ಹುದ್ದೆಗಳು ಖಾಲಿ ಇವೆ. ಇದು ವಿಲೇವಾರಿಗೆ ಪ್ರಕರಣಗಳ ಸಂಸ್ಥೆ ಹೆಚ್ಚಿಸಿದೆ. ನ್ಯಾಯಾಲಯಗಳು ೭೧ ರಿಂದ ೧೦೦ ರಷ್ಟು ಸಾಮರ್ಥ್ಯವನ್ನು ಮೀರಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದ್ಧಾರೆ
“ಪ್ರಾದೇಶಿಕತೆ ಮತ್ತು ರಾಜ್ಯ ಕೇಂದ್ರಿತ ಆಯ್ಕೆಗಳ ಕಿರಿದಾದ ಗೋಡೆಗಳ ಮೂಲಕ ನ್ಯಾಯಾಂಗ ಸೇವೆಗಳಿಗೆ ಸದಸ್ಯರನ್ನು ನೇಮಕ ಮಾಡುವ ಮೂಲಕ ರಾಷ್ಟ್ರೀಯ ಏಕೀಕರಣದ ಬಗ್ಗೆ ಯೋಚಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
೨೦೧೫ ರಲ್ಲಿ ಪ್ರಸ್ತಾಪಿಸಲಾದ ಕೇಂದ್ರದ ಅಖಿಲ ಭಾರತ ನ್ಯಾಯಾಂಗ ಸೇವೆ ವಾಸ್ತವಿಕವಾಗಿ ಯಾವುದೇ ಟೇಕರ್‌ಗಳನ್ನು ಹೊಂದಿಲ್ಲ, ಏಕೆಂದರೆ ಹರಿಯಾಣ ಮತ್ತು ಮಿಜೋರಾಂ ಸರ್ಕಾರಗಳು ಮತ್ತು ತ್ರಿಪುರಾ ಮತ್ತು ಸಿಕ್ಕಿಂನ ಎಚ್‌ಸಿಗಳು ಮಾತ್ರ ಇದಕ್ಕೆ ಒಲವು ತೋರಿದ್ದವು. ಇತರರು ಭಾಷಾ ತಡೆ ಮತ್ತು ಒಕ್ಕೂಟದ ಆಧಾರದ ಮೇಲೆ ಅದನ್ನು ವಿರೋಧಿಸಲಾಯಿತು ಎಂದಿದ್ದಾರೆ
ರಾಜ್ಯಗಳಾದ್ಯಂತ ನ್ಯಾಯಾಂಗ ಅಧಿಕಾರಿಗಳ ಇತ್ತೀಚಿನ ನೇಮಕಾತಿಗಳಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ದುಃಖಕರವೆಂದರೆ ಕೇವಲ ಶೇಕಡಾ ೬.೭ ರಷ್ಟು ಜಿಲ್ಲಾ ನ್ಯಾಯಾಲಯದ ಮೂಲಸೌಕರ್ಯಗಳು ಮಹಿಳಾ ಸ್ನೇಹಿಯಾಗಿದೆ ಎಂದು ಹೇಳಿದ್ದಾರೆ