ಯುಎಸ್ ಓಪನ್: ಜೋಕೋವಿಕ್ ಪರಾಭವ
ನ್ಯೂಯಾರ್ಕ್.ಆ.೩೧- ಹಾಲಿ ಚಾಂಪಿಯನ್ ನವೋಕ್ ಜೋಕೋವಿಕ್ ಯುಎಸ್ ಓಪನ್ ಟೂರ್ನಿಯಲ್ಲಿ ಸೋತು ಆಘಾತ ಅನುಭವಿಸಿದ್ದಾರೆ. ಇದರೊಂದಿಗೆ ೧೮ ವರ್ಷಗಳಲ್ಲೆ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್‌ನಲ್ಲಿ ನಾಲ್ಕನೆ ಸುತ್ತು ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ. ಜತಗೆ ಕ್ಯಾಲೆಂಡರ್ ವರ್ಷದಲ್ಲಿ ೨೦೧೭ರ ನಂತರ ಇದೇ ಮೊದಲ ಬಾರಿಗೆ ಜೋಕೋವಿಕ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಇಲ್ಲದೇ ವರ್ಷ ಪೂರೈಸಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಮೂರನೆ ಸುತ್ತುನಲ್ಲಿ ಜೋಕೋವಿಕ್ ಆಸ್ಟ್ರೇಲಿಯಾದ ೨೮ನೇ ಶ್ರೇಯಾಂಕಿತ ಆಟಗಾರ ಆಲೆಕ್ಸಿ ಪೊಪಿರಿನ್ ೩ ಗಂಟೆ ೧೯ ನಿಮಿಷಗಳ ಕಾಲ ಹೋರಾಡಿ ೪-೬, ೪-೬, ೬-೨, ೪-೬ ಸೆಟ್‌ಗಳಿಂದ ಮಣಿದರು. ಈ ಸೋಲಿನೊಂದಿಗೆ ೨೫ನೇ ಗ್ರ್ಯಾನ್ ಸ್ಲಾಮ್ ಗೆಲ್ಲುವ ಕನಸು ದೂರ ಉಳಿದಿದೆ. ಆಲೆಕ್ಸಿ ಪೊಪಿರಿನ್ ತಮ್ಮ ವೃತ್ತಿ ಜೀವನದಲ್ಲಿ ಅತಿ ದೊಡ್ಡ ಗೆಲುವು ಸಾಧಿಸಿದ್ದಾರೆ.
ಕಳೆದ ಮಾರ್ಚ್‌ನಿಂದಲೂ ಜೋಕೊವಿಕ್ ಕಠಿಣ ಸವಾಲುಗಳನ್ನು ಎದುರಿಸುತ್ತಾ ಬಂದಿದ್ದಾರೆ. ಆರಂಭದಲ್ಲೆ ಜೋಕೊವಿಕ್ ಉತ್ತಮ ಪ್ರದರ್ಶನ ನೀಡಲಿಲ್ಲ. ಅನಗತ್ಯ ತಪ್ಪುಗಳು ಎದುರಾಳಿಗೆ ಸಹಕಾರಿಯಾಯಿತು. ಎರಡೂ ಸೆಟ್‌ಗಳಲ್ಲಿ ಸೋತ ನಂತರ ಮೂರನೆ ಸೆಟ್‌ನಲ್ಲಿ ೬-೨ ಸೆಟ್‌ಗಳಿಂದ ಗೆದ್ದುಕೊಂಡರು. ಆದರೆ ನಾಲ್ಕನೆ ಸೆಟ್‌ನಲ್ಲಿ ಸೋಲುವ ಮೂಲಕ ನಿರಾಸೆ ಅನುಭವಿಸಿದರು.
ಇನ್ನು sಭಾರತದ ಬೋಪಣ್ಣ ಪುರುಷರ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಪ್ರಿಕ್ವಾರ್ಟರ್ ಪ್ರವೇಶಿಸಿದ್ದಾರೆ. ಪುರುಷರ ಡಬಲ್ಸ್ ವಿಭಾಗದಲ್ಲಿ ಬೋಪಣ್ಣ ಹಾಗೂ ಎಬ್ಡೆನ್ ಜೋಡಿ ಎದುರಾಳಿ ರೋಬೆಟೊ ಹಾಗೂ ಫೆಡೆರಿಕೊ ಜೋಡಿ ವಿರುದ್ಧ ೬-೨,೬-೪ ಸೆಟ್‌ಗಳಿಂದ ಗೆದ್ದರು. ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ ಹಾಗೂ ಅಲ್ದಿಲಾ ಸುಟ್ಜಿಯಾಡಿ ಎದುರಾಳಿ ಡೆಮಿಶುರ್ಸ್ ಜೋಡಿಯನ್ನ ೭-೬ (೭), ೭-೬(೫) ಸಟ್‌ಗಳಿಂದ ರೋಚಕವಾಗಿ ಗೆದ್ದರು. ಮತ್ತೊಂದು ಪುರುಷರ ಡಬಲ್ಸ್‌ನಲ್ಲಿ ಭಾರತ ಯೂಕಿ ಬಾಂಬ್ರಿ ಹಾಗೂ ಅಲ್ಬಾನೊ ಒಲಿವೆಟ್ಟಿ ಜೋಡಿ ಆಸ್ಟಿನ್ ಜೋಡಿ ವಿರುದ್ಧ ೪-೬, ೬-೩, ೭-೫ ಸೆಟ್‌ಗಳಿಂದ ಗೆದ್ದು ಮೂರನೆ ಸುತ್ತು ಪ್ರವೇಶಿಸಿದರು.