೮ ತಿಂಗಳಲ್ಲಿ ೧೬,೮೮೮ ಮಂದಿಗೆ ನಾಯಿ ಕಡಿತ
ಬೆಂಗಳೂರು,ಸೆ.೨- ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮುಂದುವರೆದಿದ್ದು, ಕೇವಲ ಎಂಟು ತಿಂಗಳಲ್ಲಿ ೧೬೮೮೮ ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿದೆ.
ಇತ್ತೀಚಿನ ನಾಯಿ ಕಡಿತದಿಂದ ವೃದ್ಧೆ ಸಾವು ಸೇರಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ನಾಯಿ ಕಚ್ಚಿದ ಪ್ರಕರಣಗಳಲ್ಲಿ ಶೇ.೪೦ ರಷ್ಟು ಸಾಕು ನಾಯಿಗಳ ಪಾತ್ರವೂ ಇರುವುದರಿಂದ ನಗರದಲ್ಲಿ ಜನ ಬೀದಿಯಲ್ಲಿ ಓಡಾಡಬೇಕಾದರೆ ಎಚ್ಚರಿಕೆ ವಹಿಸಬೇಕು ಇಲ್ಲದಿದ್ದರೆ ನಾಯಿ ಕಡಿತಕ್ಕೆ ಒಳಗಾಗಬೇಕಾಗುತ್ತದೆ.
ಕಳೆದ ಎಂಟು ತಿಂಗಳಲ್ಲಿ ೧೬೮೮೮ ಮಂದಿಗೆ ನಾಯಿ ಕಚ್ಚಿರುವುದು ಬಿಬಿಎಂಪಿಯ ಅಂಕಿ ಅಂಶಗಳಿಂದ ಬಹಿರಂಗಗೊಂಡಿದೆ. ಅದರಲ್ಲೂ ಪೂರ್ವ ಮತ್ತು ಪಶ್ಚಿಮ ವಲಯದಲ್ಲೇ ಅತಿ ಹೆಚ್ಚು ನಾಯಿಗಳ ದಾಳಿ ಪ್ರಕರಣಗಳು ನಡೆದಿರುವುದು ವರದಿಯಲ್ಲಿ ಬಯಲಾಗಿದೆ.