ಪುರುಷ ಡಬಲ್ಸ್‌ನಲ್ಲಿ ಬೋಪಣ್ಣಗೆ ಸೋಲು
ನ್ಯೂಯಾರ್ಕ್, ಸೆ.೨- ಭಾರತದ ರೋಹನ್ ಬೋಪಣ್ಣ ಯುಎಸ್ ಓಪನ್ ಟೂರ್ನಿಯ ಪುರುಷ ಡಬಲ್ಸ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಭಾರತ ಮತ್ತು ಆಸೀಸ್ ಜೋಡಿ ಮ್ಯಾಕ್ಸಿಮೊ ಗೊಂಝಾಲೆಝ್ ಮತ್ತು ಆಂಡ್ರೆಸ್ ಮೊಲ್ಟೆನಿ ಜೋಡಿ ವಿರುದ್ಧ ೧-೬, ೫-೭ ಸೆಟ್‌ಗಳಿಂದ ಸೋಲು ಕಂಡರು.
ಮೊದಲ ಸೆಟ್‌ನಲ್ಲೇ ಅರ್ಜೆಂಟಿನಾ ಜೋಡಿ ಬೋಪಣ್ಣ ಹಾಗು ಎಬ್ಡೆನ್ ಜೋಡಿ ಮೇಲೆ ಪ್ರಾಬಲ್ಯ ಮೆರೆಯಿತು. ಎರಡನೆ ಸೆಟ್‌ನಲ್ಲಿ ಬೋಪಣ್ಣ, ಎಬ್ಡೆನ್ ಜೋಡಿ ೫-೫ ಸಮಬಲದ ಹೋರಾಟ ನೀಡಿದರು. ಆದರೆ ೧೧ನೇ ಗೇಮ್‌ನಲ್ಲಿ ಅರ್ಜೆಂಟಿನಾ ಜೋಡಿ ಕಠಿಣ ಸಂದರ್ಭದಲ್ಲಿ ಅಂಕ ಪಡೆದು ಮೇಲುಗೈ ಸಾಧಿಸಿತು. ಎರಡನೆ ಸೆಟ್ನಲ್ಲಿ ತಪ್ಪು ಮಾಡಿ ಭಾರತ ಆಸೀಸ್ ಜೋಡಿ ಪಂದ್ಯವನ್ನು ಕೈಚೆಲ್ಲಿತ್ತು.
ಈ ಹಿಂದೆ ನಡೆದ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲೂ ಈ ಜೋಡಿ ಎರಡನೆ ಸುತ್ತಿನಲ್ಲೆ ಪರಾಭವಗೊಂಡಿತ್ತು. ಬೋಪಣ್ಣ ಮತ್ತು ಎಬ್ಡೆನ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಆಡಲಿದ್ದಾರೆ.