ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ
ನವದೆಹಲಿ,ಆ.೩೧:ಎಂಐ-೧೭ ಮೂಲಕ ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್ ಇಂದು ಬೆಳಿಗ್ಗೆ ಕೇದಾರನಾಥದಲ್ಲಿ ಪತನಗೊಂಡಿದೆ. ಮಳೆ ಪ್ರೇರಿತ ಭೂ ಕುಸಿತದಿಂದಾಗಿ ಯಾತ್ರಾ ಮಾರ್ಗವನ್ನು ಆಗಸ್ಟ್ ಆರಂಭದಲ್ಲಿ ಸ್ಥಗಿತಗೊಳಿಸಲಾಗಿತ್ತು. ಖಾಸಗಿ ಹೆಲಿಕಾಪ್ಟರ್‌ಗಳ ಜತೆಗೆ ವಾಯುಪಡೆಯ ಚಿಕೂನ್ ಮತ್ತು ಎಂಐ-೧೭ ಹೆಲಿಕಾಪ್ಟರ್ ಸಹಾಯದಿಂದ ರಕ್ಷಣಾ ಕಾರ್ಯಗಳು ನಡೆಯುತ್ತಿದ್ದವು.
ಈ ಹಿಂದೆ ಉತ್ತರಾಖಂಡ ಮತ್ತು ಕೇದಾರನಾಥ ಧಾಮದಲ್ಲಿ ಲ್ಯಾಂಡಿಂಗ್ ವೇಳೆ ಹಾನಿಗೊಳಗಾಗಿದ್ದ ಹೆಲಿಕಾಪ್ಟರ್ ಇಂದು ಬೆಳಿಗ್ಗೆ ಮಂದಾಕಿನಿಯ ನದಿಯ ಬಳಿ ಪತನಗೊಂಡಿದೆ. ಈ ಹೆಲಿಕಾಪ್ಟರ್ ದುರಸ್ಥಿಗಾಗಿ ಎಂಐ-೧೭ ಹೆಲಿಕಾಪ್ಟರ್ ಮೂಲಕ ಗೌಚಾರ್ ಏರ್‌ಸ್ಕ್ರಿಪ್ಟ್‌ಗೆ ಹಾರುತ್ತಿದ್ದ ವೇಳೆ ಎಂಐ-೧೭ ಹೆಲಿಕಾಪ್ಟರ್‌ನಿಂದ ಕಳಚಿ ತಾರೋಕ್ಯಾಂಪ್ ಬಳಿ ಬಿದ್ದು ಪತನಗೊಂಡಿದೆ.
ಈ ಹೆಲಿಕಾಪ್ಟರ್‌ನಲ್ಲಿದ್ದವರಿಗೆ ಗಾಯಗಳಾದ ಅಥವಾ ಸಾವು-ನೋವಾಗಿರುವ ಕುರಿತಂತೆ ಮಾಹಿತಿ ಲಭ್ಯವಾಗಿಲ್ಲ. ಇಂದು ಬೆಳಿಗ್ಗೆ ಕೇದಾರನಾಥ್ ಹೆಲಿಪ್ಯಾಡ್‌ನಿಂದ ಗೋಚಾರ್ ಹೆಲಿಪ್ಯಾಡ್‌ಗೆ ಮತ್ತೊಂದು ಹೆಲಿಕಾಪ್ಟರ್ ಮೂಲಕ ಎಳೆದೊಯ್ಯುತ್ತಿದ್ದ ಖಾಸಗಿ ಕಂಪನಿಯೊಂದರ ದೋಷಯುಕ್ತ ಹೆಲಿಕಾಪ್ಟರ್ ಲಿಂಚೋಲಿ ನದಿಗೆ ಬಿದ್ದಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿಧಿ ರಕ್ಷಣಾ ತಂಡ ಪೊಲೀಸರ ಮೂಲಕ ಮಾಹಿತಿ ಸಂಗ್ರಹಿಸಿದೆ.
ಏನ್‌ಆರ್‌ಎಫ್, ಎಸ್‌ಡಿಆರ್‌ಎಫ್ ತಂಡ ಘಟನಾ ಸ್ಥಳಕ್ಕೆ ತಲುಪಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸುದ್ದಿಸಂಸ್ಥೆ ತಿಳಿಸಿದೆ.