ಪ್ರಜಾಪ್ರಭುತ್ವ ರಕ್ಷಣೆಗೆ ಒತ್ತು: ಕಮಲಾ
ವಾಷಿಂಗ್ಟನ್, ಆ.೩೦- ಅಕ್ರಮ ಗಡಿ ವಲಸಿಗರ ತಡೆಗೆ ಬಿಗಿ ಕ್ರಮ ಕೈಗೊಳ್ಳುವುದು ಅಮೆರಿಕಾದ ಪ್ರತಿಷ್ಠೆಯನ್ನು ಕಾಪಾಡುವ ಜೊತೆಗೆ ದೇಶದಲ್ಲಿ ಪ್ರಜಾಪ್ರಭುತ್ವ ರಕ್ಷಣೆ ಮಾಡುವುದು ನಮ್ಮ ಆದ್ಯತೆ ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರೀಸ್ ಹೇಳಿದ್ದಾರೆ.
ಮಾಜಿ ಅಧ್ಯಕ್ಷ ಹಾಗು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ವರ್ಣ ಬೇಧ ನೀತಿ ಅನುಸರಿಸುವ ಮೂಲಕ ಅಮೆರಿಕಾದಲ್ಲಿ ಕಲಹ ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು ಇರುವ ಹಿನ್ನೆಲೆಯಲ್ಲಿ ಸಂದರ್ಶನದಲ್ಲಿ ಈ ಭಾರಿಯ ಚುನಾವಣೆಯಲ್ಲಿ ಅಮೆರಿಕಾದ ಜನರು ಡೊನಾಲ್ಡ್ ಟ್ರಂಪ್ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶದ ಗಡಿ ಭದ್ರಪಡಿಸಿಕೊಳ್ಳಲು ಏನು ಮಾಡಬೇಕೆಂಬುದರ ಅರಿವು ಇದೆ. ಈ ನಿಟ್ಟಿನಲ್ಲಿ ಅಕ್ರಮ ನುಸುಳುಕೋರರಿಗೆ ತಡೆ ಹಾಕಲು ಎಲ್ಲಾ ರೀತಿಯ ಕ್ರಮಗಳನ್ನು ತಾವು ಕೈಗೊಳ್ಳುತ್ತೇವೆ. ಟ್ರಾನ್ಸ್-ನ್ಯಾಷನಲ್ ಕ್ರಿಮಿನಲ್ ಸಂಸ್ಥೆಗಳು, ಅಮೆರಿಕನ್ ಕಾನೂನುಗಳ ಉಲ್ಲಂಘನೆ, ಬಂದೂಕುಗಳು, ಮಾದಕವಸ್ತುಗಳ ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
“ಕಳೆದ ದಶಕದಲ್ಲಿ ದುಃಖಕರವಾಗಿತ್ತು. ಅದು ಡೊನಾಲ್ಡ್ ಟ್ರಂಪ್ ಅವಧಿಯಲ್ಲಿ ನುಸುಳುಕೋರರು ಹೆಚ್ಚಾಗಿದ್ದರು, ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿತ್ತು. ದೇಶದ ಬಗ್ಗೆ ನಿಜವಾಗಿ ಕಾಳಜಿ ಇಲ್ಲದ ಜನರು ಅಧ್ಯಕ್ಷರಾದರೆ ಹೀಗೇ ಆಗುವುದು ಎಂದು ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ಛಾಯಾಚಿತ್ರದಿಂದ ತೀವ್ರವಾಗಿ ಭಾವುಕನಾಗಿದ್ದೇನೆ ಎಂದು ಹೇಳಿದ ಕಮಲಾ ಹ್ಯಾರಿಸ್ ವ್ಯಕ್ತಪಡಿಸಿದ್ದಾರೆ. ಚಿಕಾಗೋದಲ್ಲಿ ನಡೆದ ಡೆಮಾಕ್ರಟಿಕ್ ನ್ಯಾಶನಲ್ ಕನ್ವೆನ್ಷನ್‌ನಲ್ಲಿ ಚಿಕ್ಕಮ್ಮ ತನ್ನ ಸ್ವೀಕಾರ ಭಾಷಣವನ್ನು ನೋಡುತ್ತಿರುವಾಗ, ೮ ವರ್ಷ ವಯಸ್ಸಿನ ಅವರ ಮೊಮ್ಮಗಳು ಭಾವಚಿತ್ರ ಸೆರೆ ಹಿಡಿದಿದ್ದರು ಎಂದಿದ್ದಾರೆ
ಗಾಜಾದಲ್ಲಿ ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದದ ಅಗತ್ಯವಿದೆ ಎಂದು ಹೇಳಿದ ಅವರು,ಗಾಜಾದಲ್ಲಿನ ಪರಿಸ್ಥಿತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕದನ ವಿರಾಮ ಒಪ್ಪಂದ ಮತ್ತು ಒತ್ತೆಯಾಳುಗಳ ಬಿಡುಗಡೆಯ ಅಗತ್ಯ ಪ್ರತಿಪಾದಿಸಿದ್ದಾರೆ
“ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ.. ಮತ್ತು ಅದು ಹೇಗೆ ಮುಖ್ಯವಾಗುತ್ತದೆ. ಹಲವಾರು ಅಮಾಯಕ ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ಕಡೆ ಒಪ್ಪಂದವನ್ನು ಮಾಡಿಕೊಳ್ಳಬೇಕಾಗಿದೆ ಎನ್ನುವ ಸಲಹೆ ನೀಡಿದ್ದಾರೆ.