ಭಾರತ ಅಂಡರ್ ೧೯: ಸಮಿತ್ ದ್ರಾವಿಡ್‌ಗೆ ಸ್ಥಾನ
ನವದೆಹಲಿ. ಆ.೩೧- ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ೧೯ ವರ್ಷದೊಳಗಿನವರ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾ ಅಂಡರ್ ೧೯ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ.
ರಾಹುಲ್ ದ್ರಾವಿಡ್ ಅವರ ಪುತ್ರ ಏಕದಿನ ಮತ್ತು ಟೆಸ್ಟ್ ಎರಡು ಆವೃತ್ತಿಗಳಲ್ಲೂ ಸ್ಥಾನ ಪಡೆದಿದ್ದಾರೆ.
೧೮ ವರ್ಷದ ಸಮಿತ್ ಇತ್ತೀಚೆಗಷ್ಟೆ ಮಹಾರಾಜ ಟ್ರೋಫಿಯಲ್ಲಿ ಆಡಿ ಗಮನ ಸೆಳೆದಿದ್ದರು. ಮೈಸೂರು ವಾರಿಯರ್‍ಸ್ ಪರ ಆಡಿ ೭ ಇನ್ನಿಂಗ್ಸ್‌ಗಳಿಂದ ೮೨ ರನ್ ಹೊಡೆದಿದ್ದರು. ಗುಲ್ಬರ್ಗಾ ತಂಡದ ವಿರುದ್ಧ ೩೩ ರನ್ ಹೊಡೆದಿದ್ದರು. ಉತ್ತರ ಪ್ರದೇಶದ ಮೊಹ್ಮದ್ ಅಮ್ಮಾನ್ ಭಾರತ ಅಂಡರ್ ೧೯ ತಂಡವನ್ನು ಮುನ್ನಡೆಸಲಿದ್ದಾರೆ. ಟೆಸ್ಟ್‌ನಲ್ಲಿ ಸೋಹಮ್ ಪಟವರ್ಧನ್ ಮುನ್ನಡೆಸಲಿದ್ದಾರೆ.
ಸೆ.೨೧ರಿಂದ ಪುದುಚೆರಿಯಲ್ಲಿ ಸರಣಿ ನಡೆಯಲಿದೆ.