ಗಾಜಾದಲ್ಲಿ ಮಕ್ಕಳಿಗೆ ಪೋಲಿಯೊ ಲಸಿಕೆ
ನ್ಯೂಯಾರ್ಕ್,ಆ.೩೦ ಇಸ್ರೇಲ್ -ಗಾಜಾದಲ್ಲಿ ಮಾನವೀಯ ವಿರಾಮಕ್ಕೆ ಕದನ ವಿರಾಮಕ್ಕೆ ಒಪ್ಪಿಕೊಂಡ ಬೆನ್ನಲ್ಲೇ ಪೋಲಿಯೊ ವಿರುದ್ಧ ಮಕ್ಕಳಿಗೆ ಲಸಿಕೆ ಹಾಕುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ಅಭಿಯಾನ ಗಾಜಾ ಪಟ್ಟಿಯಾದ್ಯಂತ ಸುಮಾರು ೬,೪೦,೦೦೦ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದೆ. ಇದೇ ಭಾನುವಾರದಿಂದ ಲಸಿಕೆ ಹಾಕುವ ಕಾರ್ಯ ಆರಂಭವಾಗಲಿದೆ ಎಂದು ಹಿರಿಯ ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿ ರಿಕ್ ಪೀಪರ್‍ಕಾರ್ನ್ ಹೇಳಿದ್ದಾರೆ.
ಗಾಜಾ ಪಟ್ಟಿಯ ಮಧ್ಯ, ದಕ್ಷಿಣ ಮತ್ತು ಉತ್ತರ ಭಾಗಗಳಲ್ಲಿ ಮೂರು ಪ್ರತ್ಯೇಕ ಹಂತಗಳಲ್ಲಿ ಲಸಿಕೆ ಹಾಕಲಾಗುವುದು.ಪ್ರತಿ ಹಂತದಲ್ಲಿ, ಸ್ಥಳೀಯ ಸಮಯ ಬೆಳಗ್ಗೆ ೬ ರಿಂದ ಮದ್ಯಾಹ್ನ ೩ ಗಂಟೆಯ ತನಕ ಸತತ ಮೂರು ದಿನಗಳವರೆಗೆ ಕದನ ವಿರಾಮ ಘೋಷಿಸಲಾಗಿದ್ದು ಈ ಸಮಯದಲ್ಲಿ ಪೊಲಿಯೋ ಲಸಿಕೆ ಹಾಕಲಾಗುವುದು ಎಂದು ಹೇಳಿದ್ದಾರೆ.
೨೫ ವರ್ಷಗಳ ನಂತರ ಗಾಜಾದ ಮೊದಲ ಪೊ?ಲಿಯೊ ಪ್ರಕರಣಕ್ಕೆ ತುತ್ತಾದ ನಂತರ ೧೦ ತಿಂಗಳ ಮಗು ಭಾಗಶಃ ಪಾರ್ಶ್ವ ವಾಯುವಿಗೆ ಒಳಗಾಗಿದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಹೇಳಿದ ದಿನಗಳ ನಂತರ ಕದನ ವಿರಾಮ ಮಾಡಿಕೊಂಡಿದ್ದು ಪೊಲಿಯೋ ಲಸಿಕೆ ಹಾಕುವ ಕೆಲಸ ಆರಂಭವಾಗಿದೆ
ಅಭಿಯಾನವನ್ನು “ಪ್ಯಾಲೇಸ್ತೇನಿಯನ್ ಆರೋಗ್ಯ ಸಚಿವಾಲಯ, ವಿಶ್ವ ಆರೋಗ್ಯ ಸಂಸ್ಥೆ, ಯೂನಿಸೆಫ್ ಮತ್ತು ವಿಶ್ವಸಂಸ್ಥೆ ಸಹಯೋಗದಲ್ಲಿ ನಡೆಯಲಿದೆ.೨,೦೦೦ ಕ್ಕೂ ಹೆಚ್ಚು ಆರೋಗ್ಯ ಮತ್ತು ಸಮುದಾಯದ ಕಾರ್ಯಕರ್ತರಿಗೆ ಲಸಿಕೆ ನೀಡಲು ತರಬೇತಿ ನೀಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಶೇಕಡಾ ೯೦ರಷ್ಟು ಲಸಿಕೆ ವ್ಯಾಪ್ತಿ ಸಾಧಿಸುವ ಗುರಿಯನ್ನು ಹೊಂದಿದೆ, ಇದು ಗಾಜಾದಲ್ಲಿ ವೈರಸ್ ಹರಡುವುದನ್ನು ನಿಲ್ಲಿಸಲು ಅಗತ್ಯವಿದೆ. ಲಸಿಕೆ ಮಟ್ಟವನ್ನು ಸಾಧಿಸಲು ಅಗತ್ಯವಿದ್ದರೆ ಹೆಚ್ಚುವರಿ ನಾಲ್ಕನೇ ದಿನದ ಲಸಿಕೆ ಮತ್ತು ಮಾನವೀಯ ವಿರಾಮಕ್ಕಾಗಿ ಒಪ್ಪಂದ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.
ಪೋಲಿಯೊ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ಹೆಚ್ಚಾಗಿ ಕೊಳಚೆ ಮತ್ತು ಕಲುಷಿತ ನೀರಿನಿಂದ ಹರಡುತ್ತದೆ.
ವಿಕಾರ ಮತ್ತು ಪಾಶ್ರ್ವವಾಯು ಉಂಟುಮಾಡಬಹುದು, ಮತ್ತು ಸಂಭಾವ್ಯ ಮಾರಣಾಂತಿಕವಾಗಿದೆ. ಇದು ಮುಖ್ಯವಾಗಿ ಐದು ವರ್ಷದೊಳಗಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.
ಸಂಘರ್ಷದ ಮೊದಲು ಗಾಜಾ ಮತ್ತು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಪ್ರತಿರಕ್ಷಣೆ ದರಗಳು ಸೂಕ್ತವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.