ಪಾಕ್ ಜತೆ ಮಾತುಕತೆ ಯುಗ ಅಂತ್ಯ
ನವದೆಹಲಿ,ಆ.೩೦:ಪ್ರಧಾನಿ ನರೇಂದ್ರಮೋದಿ ಅವರಿಗೆ ಇಸ್ಲಾಮಾಬಾದ್ ಆಹ್ವಾನ ನೀಡಿರುವ ಕುರಿತಂತೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಜೈಶಂಕರ್ ಪಾಕಿಸ್ತಾನದೊಂದೊಗೆ ನಿರಂತರ ಮಾತುಕತೆಯ ಯುಗ ಮುಗಿದಿದೆ ಎಂದಿದ್ದಾರೆ.
ಬರುವ ಅ. ೧೫ ಹಾಗೂ ೧೬ರಂದು ಎಸ್‌ಸಿಒ ಸರ್ಕಾರದ ಮುಖ್ಯಸ್ಥರ ಸಭೆ ಆಯೋಜಿಸಲಿರುವ ಪಾಕಿಸ್ತಾನ,ಸಭೆಗೆ ಪ್ರಧಾನಿ ನರೇಂದ್ರಮೋದಿ ಅವರನ್ನು ಇಸ್ಲಾಮಾಬಾದ್‌ಗೆ ಆಹ್ಬಾನಿಸಿತ್ತು. ಈ ಆಹ್ವಾನವನ್ನು ಪಾಕ್‌ನೊಂದಿಗೆ ಮಾತುಕತೆ ಯುಗ ಮುಗಿದಿದೆ ಎನ್ನುವ ಮೂಲಕ ಸಚಿವ ಜೈಶಂಕರ್ ಪರೋಕ್ಷವಾಗಿ ತಿರಸ್ಕರಿಸಿದ್ದಾರೆ.
ನೆರೆಯ ರಾಷ್ಟ್ರದೊಂದಿಗೆ ಅಡೆತಡೆ ಇಲ್ಲದ ಮಾತುಕತೆ ಕ್ರಿಯೆಗಳು ಬೇರೆಯದ್ದೇ ಪರಿಣಾಮ ಬೀರಲಿದೆ ಎಂದು ದೆಹಲಿಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಹೇಳಿದ್ದಾರೆ.ಇದುವರೆಗೂ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಆರ್ಟಿಕಲ್-೩೭೦ನ್ನು ರಚಿಸಲಾಗಿತ್ತು.
ಇದರಿಂದ ಭಾರತ-ಪಾಕ್ ನಡುವಿನ ಸಂಬಂಧ ಯಾವ ರೀತಿ ಇದೆ ಎನ್ನುವುದೇ ಸಮಸ್ಯೆಯಾಗಿದೆ. ನಾವು ನಿಷ್ಕ್ರಿಯವಾಗಿಲ್ಲ.ಧನಾತ್ಮಕ ಹಾಗೂ ಋಣಾತ್ಮಕ ಕ್ರಿಯೆಗಳ ಬಗ್ಗೆ ಪ್ರತಿಕ್ರಿಯಿಸಲಿದ್ದೇವೆ ಎಂದು ಹೇಳಿದ್ದಾರೆ.