ಒಂದು ವಾರ ರಾಹುಲ್ ಅಮೆರಿಕ ಪ್ರವಾಸ
ನವದೆಹಲಿ,ಆ.೨೮-ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ವಹಿಸಿಕೊಂಡ ನಂತರ ರಾಹುಲ್ ಗಾಂಧಿ ಅವರು ಅಮೆರಿಕಾ ಪ್ರವಾಸ ಕೈಗೊಳ್ಳಲಿದ್ದು ಸೆಪ್ಟಂಬರ್ ೮ ರಂದು ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ
ಒಂದು ವಾರದ ಅಮೆರಿಕಾ ಪ್ರವಾಸದ ವೇಳೆ ಅಮೆರಿಕಾ ಸಂಸತ್ ಸದಸ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ಭಾರತೀಯ ಸಮುದಾಯದ ವಿದ್ಯಾರ್ಥಿಗಳು ಹಾಗು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಈ ವಿಷಯ ತಿಳಿಸಿದೆ
ರಾಹುಲ್ ಗಾಂಧಿ ಅವರು ಅಮೆರಿಕಾದ ಪ್ರವಾಸದ ವೇಳೆ ಕನಿಷ್ಠ ಎರಡು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಅಮೆರಿಕಾದ ಸೆನೆಟ್ ಸದಸ್ಯರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ.
೨೦೨೩ರ ಮೇ ೩೦, ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದ್ದರು. ಆಗಿನ್ನೂ ಲೋಕಸಭೆ ಚುನಾವಣೆ ನಡೆದಿರಲಿಲ್ಲ. ‘ಭಾರತ್ ಜೋಡೋ ಯಾತ್ರೆ’ ಮತ್ತು ರಾಹುಲ್ ಗಾಂಧಿಯವರ ಭವಿಷ್ಯದ ದೃಷ್ಟಿಕೋನದ ಕುರಿತು ಮಾತನಾಡಲು ಸಿಲಿಕಾನ್ ವ್ಯಾಲಿ ನಾಗರಿಕರ ಸಾವಿರಕ್ಕೂ ಹೆಚ್ಚು ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಅವರು ಭಾಗವಹಿಸಿದ್ದರು.
ಕೇಂದ್ರೀಕರಿಸಿ ಕೃತಕ ಬುದ್ಧಿಮತ್ತೆಯ ಕುರಿತು ಸುಮಾರು ೧೦೦ ಉದ್ಯಮಿಗಳು ಮತ್ತು ಡೊಮೇನ್ ತಜ್ಞರೊಂದಿಗೆ ಸಂವಾದ ನಡೆಸಿದ್ದರು.
ನವಂಬರ್ ೫ ರಂದು ನಡೆಯಲಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ಒಂದು ವಾರಗಳ ಕಾಲ ಅಮೇರಿಕಾ ಪ್ರವಾಸ ಕೈಗೊಳ್ಳಲಿರುವ ರಾಹುಲ್ ಗಾಂಧಿ ಭಾರತೀಯ ಮೂಲದ ಮತದಾರರಲ್ಲಿ ಸ್ವಲ್ಪವಾದರೂ ಅವರ ಮನಸ್ಸು ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ತಮ್ಮ ರಿಪಬ್ಲಿಕನ್ ಪ್ರತಿಸ್ಪರ್ಧಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಈ ಭೇಟಿಯು ಜಮ್ಮು ಮತ್ತು ಕಾಶ್ಮೀರ, ಹರಿಯಾಣ ಮತ್ತು ಮಹಾರಾಷ್ಟ್ರದ ನಿರ್ಣಾಯಕ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಭೇಟಿ ನೀಡಲಿದ್ದಾರೆ
ವರದಿಗಳ ಪ್ರಕಾರ, ರಾಹುಲ್ ಗಾಂಧಿ ವಾಷಿಂಗ್ಟನ್, ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ, ಚಿಕಾಗೋ ಮತ್ತು ಡಲ್ಲಾಸ್ ಸೇರಿದಂತೆ ನಾಲ್ಕೈದು ನಗರಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ.