ನೂತನ ಓವಂ ಆಸ್ಪತ್ರೆ ಉದ್ಘಾಟನೆ
ಕೆಆರ್ ಪುರ, ೨೯-ಕ್ಷೇತ್ರದ ಹೊರಮಾವು ವಾರ್ಡನ ಕೊತ್ತನೂರಿನಲ್ಲಿ ಸುಸಜ್ಜಿತ ನೂತನ ಓವಂ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದ್ದು ಇದರ ಸದುಪಯೋಗಪಡೆದುಕೊಳ್ಳಿ ಎಂದು ಶಾಸಕ ಬಿ.ಎ. ಬಸವರಾಜ ಅವರು ತಿಳಿಸಿದರು.
ಕೆಆರ್ ಪುರ ಕ್ಷೇತ್ರದ ಕೊತ್ತನೂರಿನಲ್ಲಿ ಓವಂ ಆಸ್ಪತ್ರೆಯ ಆರನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊತ್ತನೂರು ಭಾಗದಲ್ಲಿ ಹೆಚ್ಚು ಅಭಿವೃದ್ಧಿ ವೊಂದಿದ ಬಡಾವಣೆಗಳೇ ಇದ್ದು ಇಲ್ಲಿನ ಜನಕ್ಕೆ ತಕ್ಕ ಆಸ್ಪತ್ರೆ ಯನ್ನು ಎಲ್ಲಾ ಸೌಲಭ್ಯಗಳೊಂದಿಗೆ ತೆರಿದಿದ್ದಾರೆ ಎಂದು ಹೇಳಿದರು.
ಆಧುನಿಕ ಉಪಕರಣಗಳನ್ನು ವೊಂದಿರುವ ಈ ಅಸ್ಪತ್ರೆಗೆ ಒಮ್ಮೆ ಭೇಟಿ ಕೊಟ್ಟರೆ ಎಷ್ಟು ಸುರಕ್ಷತೆ ಇದೆ ಎಂಬುದು ತಿಳಿಯುವುದು ಎಂದು ಹೇಳಿದರು.
ಓವಂ ಆಸ್ಪತ್ರೆ ಇನ್ನಷ್ಟು ಎತ್ತರಕ್ಕೆ ಬೆಳೆದು ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಗಳನ್ನುನೀಡಲಿ ಎಂದು ಆಶಿಸಿದರು.
ಓವಂ ಆಸ್ಪತ್ರೆ ಸಿಇಒ ಡಾ.ಆದರ್ಶ್ ಮಾತನಾಡಿ, ೨೦೧೪ ರಲ್ಲಿ ಆರಂಭವಾದ ಓವಂ ಆಸ್ಪತ್ರೆ ಬೆಂಗಳೂರಿನಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆಗಳನ್ನು ನೀಡುತ್ತಾ ಆರು ಶಾಖೆಗಳನ್ನು ತೆರೆದಿದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರದ ಮಾಜಿ ಅಧ್ಯಕ್ಷ ಚಿದಾನಂದ,ಸಿಇಒ ಡಾ.ಆದರ್ಶ್ ಸೋಮಶೇಖರ್,
ಡಾ.ಜಾನಸ್ ಮ್ಯಾತ್ಯೂ, ಡಾ.ಮಂಜುಳಾ ಎಸ್. ಪಾಟೀಲ್, ಡಾ.ಶ್ವೇತ ವೆಂಜುಮೂರಿ, ವೆಂಕಟ್ ಶಿವರಾಮರೆಡ್ಡಿ ಮತ್ತಿತರರಿದ್ದರು.