ಪರಿಸರ ಸ್ನೇಹಿ ಗಣಪ ಪ್ರತಿಷ್ಠಾಪಿಸಿ
ಮುಂಬೈ,ಆ.೨೯-ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಹಬ್ಬ ಬರಲಿದೆ, ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು. ಮುಂಬೈನಲ್ಲಿ ಇದನ್ನು ಹೆಚ್ಚು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ, ಎಲ್ಲಾ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಮನೆಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ.ಸಲ್ಮಾನ್ ಖಾನ್ ಕುಟುಂಬ ಕೂಡ ಈ ಹಬ್ಬವನ್ನು ಆಚರಿಸುತ್ತಾ ಬಂದಿದೆ ಈ ಹಿನ್ನೆಲೆಯಲ್ಲಿ
ನಟ ಸಲ್ಮಾನ್ ಖಾನ್ ಪರಿಸರಕ್ಕೆ ಹಾನಿಯಾಗದಂತೆ ಪರಿಸರ ಸ್ನೇಹಿ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಪ್ರತಿಯೊಬ್ಬರಿಗೂ ಪರಿಸರ ಸ್ನೇಹಿ ಗಣೇಶನನ್ನು ಕರೆತರುವುದಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ ಎಂದು ಕಿವಿಮಾತು ಹೇಳಿದ್ದಾರೆ.ನಮ್ಮ ಕುಟುಂಬದಲ್ಲಿ ಗಣೇಶ ಚತುರ್ಥಿಯಂದು ಗಣೇಶನನ್ನು ಕರೆತರುವುದು ಪರಿಸರ ಸ್ನೇಹಿ ಗಣೇಶ ಎಂದು ದಬಾಂಗ ನಟ ತಿಳಿಸಿದ್ದಾರೆ.ಪಿಒಪಿ ಗಣಪತಿಗಳಿಂದ ಪರಿಸರಕ್ಕೆ ಆಗುವ ಹಾನಿ ಕುರಿತು ತಿಳಿಸಿದ್ದಾರೆ ಜೊತೆಗೆ ಅವು ನೀರಿನಲ್ಲಿ ಮುಳುಗುವುದು ಇಲ್ಲ ಹಬ್ಬದ ನಂತರ ನೀರಿನಿಂದ ತೇಲುತ್ತಾ ಹೊರ ಬರುತ್ತದೆ ಹಾಗಾಗಿ ಮಣ್ಣಿನ ಗಣಪತಿ ಸ್ಥಾಪಿಸಿ ನಿಮ್ಮ ನಿಮ್ಮ ಮನೆಯಲ್ಲಿ ಗಣಪತಿ ವಿಸರ್ಜನೆ ಮಾಡಿ ಎಂದು ಹೇಳಿದ್ದಾರೆ.
ದಿವ್ಯಾಸ್ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಭಾಗವಹಿಸಿದ್ದರು. ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಜನರಲ್ಲಿ ಮನವಿ ಮಾಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಸಹೋದರಿ ಅಲ್ವಿರಾ ಅವರೊಂದಿಗೆ ಭಾಗವಹಿಸಿದ್ದರು ಇದಲ್ಲದೆ ಸೋನು ನಿಗಮ್ ಮತ್ತು ಅಮೃತಾ ಫಡ್ನವಿಸ್ ,ಸೋನಾಲಿ ಬೇಂದ್ರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ, ಸಲ್ಮಾನ್ ಖಾನ್ ತಮ್ಮ ನೃತ್ಯದ ಶೈಲಿಯಲ್ಲಿ ಜನರಿಗೆ ಈ ವಿಶೇಷ ಸಂದೇಶವನ್ನು ನೀಡಿದ್ದಾರೆ ಮತ್ತು ತಮ್ಮ ನೃತ್ಯ ಮತ್ತು ಹಾಡುಗಳಿಂದ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದ್ದಾರೆ.
ಅವರು ಸಧ್ಯ ಸಿಕಂದರ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರವು ೨೦೨೫ ರಲ್ಲಿ ಈದ್ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಮತ್ತು ಸಲ್ಮಾನ್ ಖಾನ್ ಜೊತೆಗೆ ಸುನೀಲ್ ಶೆಟ್ಟಿ, ರಶ್ಮಿಕಾ ಮಂದಣ್ಣ ಸಹ ನಟಿಸಿದ್ದಾರೆ