ಜಾಮೀನು ನಿಯಮ: ಸುಪ್ರೀಂ ವಿಶ್ಲೇಷಣೆ
ಅಕ್ರಮ ಹಣ ವರ್ಗಾವಣೆ
ನವದೆಹಲಿ,ಆ.೨೮:ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಒಂದು ಕಾನೂನಿನ ನಿಯಮ ಹಾಗೂ ಜೈಲು ಒಂದು ಅಪವಾದ ಎಂದು ಸುಪ್ರೀಂಕೋರ್ಟ್ ಇಂದು ವಿಶ್ಲೇಷಿಸಿದೆ.
ಜಾರ್ಖಂಡ್ ಮುಖ್ಯಮಂತ್ರಿ ಆಪ್ತರಿಗೆ ಸಂಬಂಧಿಸಿದ ಮನಿಲ್ಯಾಂಡರಿಂಗ್ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಬಿ.,ಆರ್ ಗವಾಯಿ ಮತ್ತು ಕೆ.ಎಲ್.ವಿಶ್ವನಾಥ್ ಅವರನ್ನೊಳಗೊಂಡ ಪೀಠ ಮನಿಲ್ಯಾಂಡರಿಂಗ್ ಕಾಯ್ದೆಯ ಸೆಕ್ಷೆನ್-೪೫ರಡಿ ಜಾಮೀನು ಒಂದು ನಿಯಮವಾದರೆ, ಜೈಲು ಒಂದು ಅಪವಾದ ಎಂದು ಅವಲೋಕಿಸಿದ್ದಾರೆ.
ಈ ನಿಯಮವನ್ನು ಪರಿಗಣಿಸಿರುವ ಸುಪ್ರೀಂಕೋರ್ಟ್ ಜಾರಿನಿರ್ದೇಶನಾಲಯ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತ ಸಹಾಯಕನಿಗೆ ಅಕ್ರಮ ಗಣಿಗಾರಿಕೆ ಪ್ರಕರಣ ವಿಚಾರಣೆ ನಡೆಸಿ ಜಾಮೀನು ನೀಡಿದ ವೇಳೆ ನ್ಯಾಯಾಲಯ ಈ ಅವಲೋಕನ ಮಾಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿನ ಪ್ರಕರಣಗಳಲ್ಲಿಯೂ ಜಾಮೀನು ಒಂದು ನಿಯಮ,ಜೈಲು ಒಂದು ಅಪವಾದ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಯಾವುದೇ ವ್ಯಕ್ತಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಾರದು ಎಂದು ಹೇಳಿದೆ.
ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಷ್‌ಸಿಸೋಡಿಯಾ ಅವರಿಗೆ ಸಂಬಂಧಿಸಿದ ಅಕ್ರಮ ಹಣವರ್ಗಾವಣೆ, ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಆ. ೯ ರಂದು ನೀಡಿದ್ದ ತೀರ್ಪನ್ನುಈ ವೇಳೆ ಉಲ್ಲೇಖಿಸಿದ ಸುಪ್ರೀಂಕೋರ್ಟ್ ವ್ಯಕ್ತಿಯ ಸ್ವಾತಂತ್ರ್ಯ ಒಂದು ನಿಯಮ, ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನದಿಂದ ಅದನ್ನು ಕಳೆದುಕೊಳ್ಳುವುದು ಅಪವಾದ ಎಂದು ಹೇಳಿದ್ದಾರೆ.
ಇದೇ ವೇಳೆ ಸುಪ್ರೀಂಕೋರ್ಟ್ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಸಿಎಂ ಸೋರೆನ್ ಅವರ ಆಪ್ತ ಸಹಾಯಕ ಪ್ರೇಮ್‌ಪ್ರಕಾಶ್‌ಖೇರ್ ಜಾಮೀನು ಮಂಜೂರು ಮಾಡಿದೆ.
ಮಾ. ೨೨ ರಂದು ಜಾರ್ಖಂಡ್ ಹೈಕೋರ್ಟ್ ಪ್ರೇಮ್ ಪ್ರಕಾಶ್‌ಗೆ ಜಾಮೀನು ನಿರಾಕರಿಸಿರುವ ಆದೇಶವನ್ನು ತಳ್ಳಿ ಹಾಕಿದ ಸುಪ್ರೀಂಕೋರ್ಟ್, ಪ್ರಕರಣದ ವಿಚಾರವನ್ನು ತ್ವರಿತಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.