ಹೊಸ ಮನೆಗೆ ತೆರಳಿದ ನಟಿ ಶ್ರದ್ಧಾ ಕಪೂರ್
ಮುಂಬೈ, ಆ.೨೮-ಶ್ರದ್ಧಾ ಕಪೂರ್ ಅಭಿನಯದ ಇತ್ತೀಚಿನ ಚಿತ್ರ ಸ್ತ್ರೀ ೨ ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಸ್ಫೋಟಕ ಆರಂಭದ ನಂತರ, ಸ್ತ್ರೀ ೨ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಲಾಭ ಗಳಿಸುವುದನ್ನು ಮುಂದುವರೆಸಿದೆ. ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅಭಿನಯದ ಚಿತ್ರ ದೇಶಾದ್ಯಂತ ೪೦೦ ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಈ ಚಿತ್ರವು ಅವರ ವೃತ್ತಿಜೀವನದ ಅತಿದೊಡ್ಡ ಓಪನಿಂಗ್ ನೀಡಿದೆ. ಚಿತ್ರದ ಯಶಸ್ಸಿನ ನಂತರ, ಶ್ರದ್ಧಾ ಕಪೂರ್ ಈಗ ಹೊಸ ಮನೆಗೆ ಶಿಫ್ಟ್ ಆಗುತ್ತಿದ್ದಾರೆ ಎಂಬ ಸುದ್ದಿ ಇದೆ. ಹೃತಿಕ್ ರೋಷನ್ ವಾಸವಿದ್ದ ಮನೆಯನ್ನು ಶ್ರದ್ಧಾ ಕಪೂರ್ ಬಾಡಿಗೆಗೆ ಪಡೆದಿದ್ದಾರೆ.ಇದು ಜುಹುದಲ್ಲಿರುವ ಮತ್ತು ಸಮುದ್ರಕ್ಕೆ ಎದುರಾಗಿದೆ. ಶ್ರದ್ಧಾ ಮುಂಬೈನಲ್ಲಿ ೬೦ ಕೋಟಿ ರೂಪಾಯಿ ಮೌಲ್ಯದ ಮನೆ ಸೇರಿದಂತೆ ಸಾಕಷ್ಟು ಆಸ್ತಿ ಹೊಂದಿದ್ದಾರೆ.
ಹೃತಿಕ್ ಕೂಡ ಅದೇ ಕಟ್ಟಡದಲ್ಲಿರುವ ಮತ್ತೊಂದು ಫ್ಲಾಟ್‌ಗೆ ಶಿಫ್ಟ್ ಆಗಿದ್ದಾರೆ. ವರದಿಗಳ ಪ್ರಕಾರ, ಈ ಹಿಂದೆ ಅವರು ಈ ಮನೆಗೆ ತಿಂಗಳಿಗೆ ೮.೫ ಲಕ್ಷ ರೂಪಾಯಿ ಬಾಡಿಗೆ ಪಾವತಿಸುತ್ತಿದ್ದರು. ಐಷಾರಾಮಿ ಡ್ಯುಪ್ಲೆಕ್ಸ್ ಕಟ್ಟಡಕ್ಕೆ ಇದೀಗ ಶ್ರದ್ಧಾ ವಾಸಕ್ಕೆ ಬರುತ್ತಿದ್ದಾರೆ.ಹೃತಿಕ್ ಮನೆ ಇರುವ ಕಟ್ಟಡದಲ್ಲೇ ಅಕ್ಷಯ್ ಕುಮಾರ್ ಕೂಡ ಕುಟುಂಬ ಸಮೇತ ವಾಸವಾಗಿದ್ದಾರೆ.ಶ್ರದ್ದಾ ಸೂಪರ್‌ಸ್ಟಾರ್‌ನ ನೆರೆಹೊರೆಯವರಾಗಲಿದ್ದಾರೆ.ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅವರ ಸ್ತ್ರೀ ೨ ಚಿತ್ರದಲ್ಲಿ ಅಪರಶಕ್ತಿ ಖುರಾನಾ, ಅಭಿಷೇಕ್ ಬ್ಯಾನರ್ಜಿ ಮತ್ತು ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ವರುಣ್ ಧವನ್ ಮತ್ತು ಅಕ್ಷಯ್ ಕುಮಾರ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.