ಇತಿಹಾಸ ಪ್ರಸಿದ್ಧ ಮಣ್ಣಿನ ಮಡಿಕೆ ಒಡೆದ ಹಾಕಿದ ಬಾಲಕ
ಜೆರುಸಲೇಮ್,ಅ.೨೮-ಇಸ್ರೇಲ್‌ನ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ಸಮಯದಲ್ಲಿ ನಾಲ್ಕು ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ೩,೫೦೦ ವರ್ಷಗಳಷ್ಟು ಹಳೆಯದಾದ ಅಪರೂಪದ ಮಣ್ಣಿನ ಮಡಿಕೆ ಒಡೆದು ಹಾಕಿದ ಘಟನೆ ಜರುಗಿದೆ.
ಇದು ೨೨೦೦ ಮತ್ತು ೧೫೦೦ ಬಿಸಿ ನಡುವಿನ ಕಂಚಿನ ಯುಗದ ಹಿಂದಿನದು ಎಂದು ವಸ್ತು ಸಂಗ್ರಹಾಲಯ ತಿಳಿಸಿದೆ.ಉತ್ತರ ಇಸ್ರೇಲ್‌ನ ಹೈಫಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ಹೆಚ್ಟ್ ಮ್ಯೂಸಿಯಂ ನಲ್ಲಿ ಈ ಘಟನೆ ಸಂಭವಿಸಿದೆ.
ಹೆಚ್ಟ್ ಮ್ಯೂಸಿಯಂ ಪುರಾತತ್ತ್ವ ಶಾಸ್ತ್ರದ ಮತ್ತು ಕಲಾ ವಸ್ತುಗಳನ್ನು ಹೊಂದಿದೆ. ನಾಲ್ಕು ವರ್ಷದ ಬಾಲಕ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದಾಗ ಮಣ್ಣಿನ ಮಡಿಕೆ ಒಳಗೆ ಏನಿದೆ ಎಂದು ಕುತೂಹಲದಿಂದ ಬಗ್ಗಿ ನೋಡಿದಾಗ ಆಕಸ್ಮಿಕವಾಗಿ ಅದು ನೆಲಕ್ಕೆ ಬಿದ್ದು ಅಪ್ಪಳಿಸಿದೆ.
ಈ ಘಟನೆ ನಂತರ ಗಾಬರಿಗೊಂಡ ಬಾಲಕನಿಗೆ ವಸ್ತುಸಂಗ್ರಹಾಲಯದ ಅಧಿಕಾರಿಗಳು ಸಾಂತ್ವನ ಹೇಳಿ ಯಾವುದೇ ಅಡೆತಡೆಗಳಿಲ್ಲದೆ ಕಲಾಕೃತಿಗಳನ್ನು ಪ್ರದರ್ಶಿಸುವುದನ್ನು ಮುಂದುವರಿಸುವುದಾಗಿ ಹೇಳಿದೆ.
ಪ್ರದರ್ಶನದ ವಸ್ತುಗಳು ಉದ್ದೇಶಪೂರ್ವಕವಾಗಿ ಹಾನಿಗೊಳಗಾದ ಹಲವಾರು ಪ್ರಕರಣಗಳಿವೆ, ಮತ್ತು ಅಂತಹ ಪ್ರಕರಣಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಆದರೆ ಈ ಪ್ರಕರಣದಲ್ಲಿ ಪರಿಸ್ಥಿತಿ ಹಾಗಿರಲಿಲ್ಲ. ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ಚಿಕ್ಕ ಮಗುವಿನ ಕೈಯಿಂದ ಆಕಸ್ಮಿಕವಾಗಿ ಮಣ್ಣಿನ ಮಡಿಕೆ ಹಾಳಾಗಿದೆ
ಮಡಿಕೆ ಪುನಃಸ್ಥಾಪಿಸಲು ಸಂರಕ್ಷಣಾ ತಜ್ಞರನ್ನು ಸಹ ನೇಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.