೪೦೦ ಕೋಟಿ ರೂ.ಗಡಿ ದಾಟಿದ ಸ್ತ್ರೀ ಚಿತ್ರಗಳಿಕೆ
ಮುಂಬೈ,ಅ.೨೭-ಯಾವುದೇ ಭರ್ಜರಿ ತಾರಾಬಳಗ ಇಲ್ಲದೆ.. ಅದ್ಧೂರಿ ಸೆಟ್ಟಿಂಗ್‌ಗಳು, ಅದ್ಧೂರಿ ಬಜೆಟ್ ಇಲ್ಲದೆ, ಸ್ತ್ರೀ ೨ ಚಿತ್ರ ಸದ್ದಿಲ್ಲದೆ ದಾಖಲೆಗಳನ್ನು ಮುರಿಯುತ್ತಿದೆ. ಮುಂಗಡ ರೂಪದಲ್ಲಿ ರೂ.೨೦ ಕೋಟಿ ಗಳಿಸಿದ ಚಿತ್ರ ಬಿಡುಗಡೆಯಾದ ನಂತರ ತನ್ನ ಓಟವನ್ನು ಮುಂದುವರೆಸುತ್ತಿದೆ. ಇದರೊಂದಿಗೆ, ಸ್ತ್ರೀ ೨ ನ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ೪೦೧.೫೫ ಕೋಟಿಯಾಗಿದೆ. ಇದೀಗ ೪೫೦ ಕೋಟಿ ಕ್ಲಬ್‌ನತ್ತ ದಾಪುಗಾಲು ಹಾಕುತ್ತಿದೆ.
ಸ್ತ್ರೀ ೨ ೨೦೧೮ ರ ಶ್ರದ್ಧಾ ಕಪೂರ್-ರಾಜ್‌ಕುಮಾರ್ ರಾವ್-ನಟಿಸಿದ ಸ್ತ್ರೀ ಚಿತ್ರದ ಮುಂದುವರಿದ ಭಾಗವಾಗಿದೆ . ಅಪಾರಶಕ್ತಿ ಖುರಾನಾ, ಅಭಿಷೇಕ್ ಬ್ಯಾನರ್ಜಿ, ಪಂಕಜ್ ತ್ರಿಪಾಠಿ ಮತ್ತು ವಿಜಯ್ ರಾಝ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈಗಾಗಲೇ ಯಶ್ ಅಭಿನಯದ ಕೆಜಿಎಫ್ ದಾಖಲೆಯನ್ನು ಹಿಂದಿಕ್ಕುವ ಹಂತ ತಲುಪಿರುವ ಚಿತ್ರವು ಕಲೆಕ್ಷನ್ ನಲ್ಲಿ ಅಬ್ಬರವನ್ನು ಸೃಷ್ಟಿಸುತ್ತಿದೆ, ಶಾರುಖ್, ರಜನಿಕಾಂತ್, ಪ್ರಭಾಸ್‌ರಂತಹ ಪ್ಯಾನ್ ಇಂಡಿಯಾ ಸ್ಟಾರ್‌ಗಳ ದಾಖಲೆಯನ್ನು ಮುರಿಯುತ್ತಿದೆ. ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ನಾಯಕಿಯರಾಗಿ ನಟಿಸಿರುವ ಈ ಚಿತ್ರವು ಈ ವರ್ಷ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆಯನ್ನು ಮುಂದುವರೆಸಿದೆ. ಕೇವಲ ಹಾರರ್ ಮತ್ತು ಕಾಮಿಡಿ ಹಿನ್ನಲೆಯಲ್ಲಿ ಬರುವ ಈ ಸಿನಿಮಾದ ಕಂಟೆಂಟ್ ಹೀರೋ.
ನಿಜವಾಗಲೂ ರೂ.೫೦೦ ಕೋಟಿ ಗಡಿ ದಾಟಿದರೆ ಅಮರ್ ಕೌಶಿಕ್ ಹೆಸರು ಬಾಲಿವುಡ್ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎನ್ನುತ್ತಾರೆ ಸಿನಿಮಾ ತಜ್ಞರು. ಸೀಮಿತ ಬಜೆಟ್ ನಲ್ಲಿ ತಯಾರಾದ ಸ್ತ್ರೀ ೨ ಚಿತ್ರದ ನಂತರ ಕೇವಲ ಕಂಟೆಂಟ್ ನೆಚ್ಚಿಕೊಂಡು ತಯಾರಾದ ಚಿತ್ರ ಸ್ತ್ರೀ ೨, ಅದೇ ಸರಣಿಯಲ್ಲಿ ಮತ್ತಷ್ಟು ಚಿತ್ರಗಳನ್ನು ನಿರ್ಮಿಸಲು ನಿರ್ಮಾಪಕರು ಮುಂದಾಗಿದ್ದಾರೆ. ಇಷ್ಟು ವರ್ಷ ಸ್ಟಾರ್ ಹೀರೋಗಳು ನಟಿಸಿದರೆ ಮಾತ್ರ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ ಎಂಬ ಭ್ರಮೆ ಈ ಸಿನಿಮಾದಿಂದ ದೂರವಾಗಿದೆ.
ಸ್ತ್ರೀ ೨ ಚಿತ್ರವು ಈಗಾಗಲೇ ಸಲಾರ್ ಚಿತ್ರದ ಕಲೆಕ್ಷನ್‌ಗೆ ಹತ್ತಿರದಲ್ಲಿದೆ.