ಮದುವೆ ಯಾವಾಗ, ರಾಹುಲ್ ಗೆ ಪ್ರಶ್ನೆ
ನವದೆಹಲಿ, ಆ. ೨೭- ನಿಮ್ಮ ಮದುವೆ ಯಾವಾಗ ಎನ್ನುವ ಪ್ರಶ್ನೆ ಮತ್ತೇ ರಾಹುಲ್ ಗಾಂಧಿಯವರಿಗೆ ಪುನಾರವರ್ತನೆಯಾಗಿದೆ. ಶ್ರೀನಗರದಲ್ಲಿ ವಿದ್ಯಾರ್ಥಿನಿಯೊಂದಿಗೆ ಸಂವಾದ ನಡೆಸುತ್ತಿರುವ ವೇಳೆ ವಿದ್ಯಾರ್ಥಿಯಿಂದ ರಾಹುಲ್ ಅವರಿಗೆ ಈ ಪ್ರಶ್ನೆ ಎದುರಾಗಿದೆ.
ಸ್ವತಃ ರಾಹುಲ್ ಗಾಂಧಿ ಯವರೆ ಈ ಪ್ರಶ್ನೆಯನ್ನು ತಮ್ಮ ಎಕ್ಸ್ ಕಾತೆಯಲ್ಲಿ ಹಂಚಿಕೊಂಡಿದ್ದಾರೆ. ಶ್ರೀನಗರ ತೆರೆದ ಮೈದಾನದಲ್ಲಿ ಮೇಜಿನ ಮುಂದೆಕುಳಿತ ರಾಹುಲ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದರು.
ಕಾಶ್ಮೀರ ಮಹಿಳೆಯರು ಶಕ್ತಿ, ಸ್ಥಿತಿ ಸ್ಥಾಪಕತ್ವ, ಬುದ್ಧಿವಂತಿಕೆ ಕುರಿತಂತೆ ಸಾಕಷ್ಟು ನಂಬಿಕೆಯಿದೆ ಎಂದು ಹೇಳುತ್ತಿರುವ ನಡುವೆಯೇ ರಾಹುಲ್ ಅವರಿಗೆ ವಿದ್ಯಾರ್ಥಿನಿರ್ಯೋವಳಿಂದ ಈ ಪ್ರಶ್ನೆ ಎದುರಾಗಿದೆ.
೫೪ವರ್ಷದ ವಿಪಕ್ಷ ನಾಯಕ ನಗುತ್ತಲೇ ವಿದ್ಯಾರ್ಥಿನಿ ಪ್ರಶ್ನೆಗೆ ಉತ್ತರಿಸಿ ನಾನು ೨೦ನೇ ವರ್ಷದಿಂದಲೂ ಈ ಒತ್ತಡದಿಂದ ನಿಭಾಯಿಸುತ್ತಿದ್ದೇನೆ. ಶೀಘ್ರದಲ್ಲೇ ಈ ಯೋಜನೆಯನ್ನು ನಾನು ಅನುಸರಿಸುತ್ತೇನೆ ಎಂದು ಹೇಳಿದ್ದಾರೆ.
ಈ ವರ್ಷದ ರಾಯ್‌ಬರೇಲಿ ಲೋಕಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲೂ ರಾಹುಲ್ ಗೆ ಈ ಪ್ರಶ್ನೆ ಎದುರಾಗಿತ್ತು. ಆ ಪ್ರಶ್ನೆಗೆ ರಾಹುಲ್ ಶೀಘ್ರದಲ್ಲೇ ಎನ್ನುವ ಉತ್ತರವನ್ನು ನೀಡಿದ್ದರು.