ಒಂದಿಂಚು ಭೂಮಿ ಅತಿಕ್ರಮಣ ಮಾಡಿಲ್ಲ
ಹೈದರಾಬಾದ್,ಅ.೨೬-ತೆಲಂಗಾಣದಲ್ಲಿ ನಟ ಅಕ್ಕಿನೇನಿ ನಾಗಾರ್ಜುನ ಮಾಲಿಕತ್ವದ ಎನ್ ಕನ್ವೆನ್ಷನ್ ಸೆಂಟರ್ ಕೆಡವಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದರೂ ಈಗ ಈ ಸುದ್ದಿಗಳೇ ರಾರಾಜಿಸುತ್ತಿವೆ.
ಇದೀಗ ಎನ್-ಕನ್ವೆನ್ಷನ್ ನಿರ್ಮಿಸಿದ ಭೂಮಿ ಪಟ್ಟಾ ದಾಖಲಾತಿ ಭೂಮಿ ಎಂದಿರುವ ನಟಿ ನಾಗಾರ್ಜುನ ಅದರಾಚೆಗಿನ ಒಂದು ಇಂಚು ಭೂಮಿಯನ್ನು ಸಹ ಅತಿಕ್ರಮಿಸಲಾಗಿಲ್ಲ ಎಂದು ನಾಗಾರ್ಜುನ ಟ್ವೀಟ್ ಮಾಡಿದ್ದಾರೆ.ಕೆಲವು ಸತ್ಯಗಳನ್ನು ಬಹಿರಂಗಪಡಿಸಲು ಈ ಹೇಳಿಕೆ ನೀಡುತ್ತಿದ್ದೇನೆ ಎಂದು ನಟ ಹೇಳಿದ್ದಾರೆ. ತಾನು ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ ಎಂದಿದ್ದಾರೆ.
ಅವರು ಒಂದು ಇಂಚು ಕೂಡ ಒತ್ತುವರಿ ಮಾಡಿಲ್ಲ ಆಂಧ್ರಪ್ರದೇಶದ ಭೂಕಬಳಿಕೆ (ನಿಷೇಧ) ಕಾಯ್ದೆಯ ವಿಶೇಷ ನ್ಯಾಯಾಲಯವು ೨೦೧೪ರ ಫೆ.೨೪ರಂದು ತೀರ್ಪು ನೀಡಿ, ತುಮ್ಮಿಡಿಕುಂಟಾ ಕೆರೆಯಲ್ಲಿ ಯಾವುದೇ ಅತಿಕ್ರಮಣ ನಡೆದಿಲ್ಲ ಎಂದು ಹೇಳಿದ್ದಾರೆ ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ.
ಹೈದ್ರಾ (ಹೈದರಾಬಾದ್ ವಿಪತ್ತು ನಿರ್ವಹಣೆ ಮತ್ತು ಆಸ್ತಿ ಸಂರಕ್ಷಣಾ ಸಂಸ್ಥೆ) ಅಧಿಕಾರಿಗಳ ತಂಡ ಶನಿವಾರ ಬೆಳಗ್ಗೆ ನಾಗಾರ್ಜುನ ಅವರಿಗೆ ಸೇರಿದ ಎನ್ ಕನ್ವೆನ್ಷನ್ ಸೆಂಟರ್ ಅನ್ನು ನೆಲಸಮಗೊಳಿಸಿದೆ ಎನ್ನಲಾಗಿದೆ. ತುಮ್ಮಿಡಿ ಕೆರೆ ಒತ್ತುವರಿ ಮಾಡಿಕೊಂಡು ಎನ್ ಕನ್ವೆನ್ಷನ್ ನಿರ್ಮಿಸಲಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ನಾಗಾರ್ಜುನ್ ತಮ್ಮ ಟ್ವೀಟ್‌ನಲ್ಲಿ, ಈ ಅಕ್ರಮ ಕೃತ್ಯದಿಂದ ನನಗೆ ಬೇಸರವಾಗಿದೆ. ಇದು ನ್ಯಾಯಾಲಯದ ಆದೇಶ ಮತ್ತು ತಡೆಯಾಜ್ಞೆ ವಿರುದ್ಧ ಕೈಗೊಂಡಿರುವ ಕ್ರಮವಾಗಿದೆ. ಕಟ್ಟಡ ನಿರ್ಮಾಣದಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದಿದ್ದಾರೆ . ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ಭಾನುವಾರ ಸಂಜೆ ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ.