ಜನರೇ ನನಗೆ ಪದಕ: ವಿನೇಶ್
ಹರ್ಯಾಣ. ಆ.೨೬-ಭವಿಷ್ಯದಲ್ಲಿ ಏನಾಗಲಿದೆ ಎನ್ನುವುದು ಗೊತ್ತಿಲ್ಲ. ಆದರೆ ನನಗೆ ಜನರ ಬೆಂಬಲವಿದೆ. ನನ್ನ ಪಾಲಿಗೆ ಅವರೇ ಪದಕ ಎಂದಯ ಭಾರತ ತಾರಾ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ತಿಳಿಸಿದ್ದಾರೆ.
ನಿನ್ನೆ ಹರ್ಯಾಣ ಖಾಪ್ ಪಂಚಾಯತ್ ಕುಸ್ತಿಪಟು ವಿನೇಶ್ ಫೋಗಟ್‌ಗೆ ಚಿನ್ನದ ಪದಕ ನೀಡಿ ಗೌರವಿಸಿದೆ. ವಿನೇಶ್ ಹುಟ್ಟುಹಬ್ಬದ ಪ್ರಯುಕ್ತ ಜಜ್ಜಾರ್‌ನಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿನೇಶ್‌ಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ವಿನೇಶ್‌ಗೆ ಸನ್ಮಾನ ಮಾಡಿದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೂ ಮುನ್ನ ವಿನೇಶ್ ಫೋಗಟ್ ತೂಕ ಹೆಚ್ಚಿದ್ದರಿಂದ ಕ್ರೀಡಾಕೂಟದಿಂದಲೇ ಅನರ್ಹಗೊಂಡು ಪದಕ ವಂಚಿತರಾಗಿದ್ದರು.