ಟ್ರಂಪ್ ಗೆ ಜೂನಿಯರ್ ಕೆನಡಿ ಬೆಂಬಲ
ವಾಷಿಂಗ್ಟನ್, ಆ,೨೪- ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಪಕ್ಷೇತರವಾಗಿ ಕಣಕ್ಕಿಳಿದಿದ್ದ ಆಭ್ಯರ್ಥಿ ರಾಬರ್ಟ್ ಎಫ್ ಕೆನಡಿ ಜೂನಿಯರ್ ಅವರು ಸ್ಪರ್ಧೆಯಿಂದ ಹಿಂದೆ ಸರಿದು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಿದ್ದಾರೆ.
ಅರಿಜೋನಾದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಡೋನಾಲ್ಡ್ ಟ್ರಂಪ್ ಜೊತೆ ವೇದಿಕೆ ಹಂಚಿಕೊಂಡು ಬೆಂಬಲ ಪ್ರಕಟಿಸಿದ್ದಾರೆ
೭೦ ವರ್ಷದ್ ರಾಬರ್ಟ್ ಎಫ್ ಕೆನಡಿ ತಮ್ಮ ಜೀವನದ ಬಹುಪಾಲು ಡೆಮೋಕ್ರಾಟ್ ಆಗಿ ಕಳೆದಿದ್ದರು. ಇದೀಗ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗೆ ಬೆಂಬಲ ಘೋಷಿಸಿರುವುದು ಟ್ರಂಪ್‌ಗೆ ಮತ್ತಷ್ಟು ಬಳ ಬಂದಿದೆ.
ಅರಿಜೋನಾದ ಫೀನಿಕ್ಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ೧೦ ಅಮೆರಿಕಾದ ಚುನಾವಣೆಯ ಯುದ್ಧಭೂಮಿ ರಾಜ್ಯಗಳಲ್ಲಿ ಮತದಾನದಿಂದ ತಮ್ಮ ಹೆಸರನ್ನು ತೆಗೆದುಹಾಕಲು ಪ್ರಯತ್ನಿಸುವುದಾಗಿ ಹೇಳಿದ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಿ ಎಂದು ಕೇಳಿಕೊಂಡರು.
ನಂತರ ಗ್ಲೆಂಡೇಲ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ರಾಬರ್ಟ್ ಕೆನಡಿ ಅವರನ್ನು ವೇದಿಕೆಯ ಮೇಲೆ ಸ್ವಾಗತಿಸಿದಾಗ ಡೊನಾಲ್ಡ್ ಟ್ರಂಪ್ ಅವರನ್ನು “ಅದ್ಭುತ” ನಾಯಕ ಎಂದು ಹೊಗಳಿದ್ದಾರೆ.
ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರು ರಾಬರ್ಟ್ ಕೆನಡಿ ಅವರ ಬೆಂಬಲ ಪಡೆಯಲು ವಿಫಲರಾದ ಹಿನ್ನೆಲೆಯಲ್ಲಿ ಅವರು ಡೊನಾಲ್ಡ್ ಟ್ರಂಪ್‌ಗೆ ಬೆಂಬಲ ಘೋಷಿಸಿದ್ದಾರೆ. ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ನವಂಬರ್ ೫ ರಂದು ನಡೆಯಲಿದೆ