ನಟ ನಾಗಾರ್ಜುನ ಕನ್‌ವೆನ್‌ಷನ್ ಸೆಂಟರ್ ನೆಲಸಮ
ಹೈದರಾಬಾದ್, ಆ. ೨೪-ಅಕ್ರಮ ನಿರ್ಮಾಣ ಆರೋಪದಲ್ಲಿ ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ನಿರ್ವಹಣೆ, ಅಧಿಕಾರಿಗಳ ತಂಡ, ಖ್ಯಾತ ನಟ ನಾಗಾರ್ಜುನ ಒಡೆತನದ ವಿಸ್ತಾರವಾದ ಎನ್ ಕನ್‌ವೆನ್‌ಷನ್ ಸೆಂಟರ್ ಕೆಡವಲು ಕಾರ್ಯಾಚರಣೆ ಆರಂಭಿಸಿದೆ.
೧೦ ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಎನ್ ಕನ್‌ವೆನ್‌ಷನ್ ಸೆಂಟರ್ ಜಾಗಕ್ಕೆ ಸಂಬಂಧಿಸಿದ ದಾಖಲೆಗಳು ಹಲವು ವರ್ಷಗಳಿಂದ ಪರಿಶೀಲನೆಯಲ್ಲಿದೆ.
ನಗರದ ಮಾದಪುರ ಪ್ರದೇಶದಲ್ಲಿನ ತಮ್ಮಿಡಿಕುಂಟ ಕೆರೆಯ ಪ್ರದೇಶ ಮತ್ತು ಬಫರ್‌ಜೋನ್ ನಲ್ಲಿ ಅಕ್ರಮ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ ಈ ಕಟ್ಟಡವನ್ನು ನೆಲೆಸಮ ಮಾಡಲಾಗಿದೆ.
ಉತ್ತರ ಟ್ಯಾಂಕ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಒದಗಿಸಿದ ಅಧಿಕೃತ ದಾಖಲೆಗಳ ಪ್ರಕಾರ ತಮ್ಮಿಡಿಕುಂಟ ಕೆರೆಯ ಎಫ್ ಟಿ ಎಲ್ ಪ್ರದೇಶ ಅಂದಾಜು ೨೯.೨೪ ಎಕರೆಯಾಗಿದೆ.
ಎನ್ ಕನ್‌ವೆನ್‌ಷನ್ ಸೆಂಟರ್ ಕೆರೆಯ ಅಂದಾಜು ೧.೧೨ ಎಕರೆ ಮತ್ತು ಹೆಚ್ಚುವರಿಯಾಗಿ ೨ ಎಕರೆ ಪ್ರದೇಶವನ್ನು ಬಫರ್ ಜೋನ್ ಅತಿಕ್ರಮಿಸಿಕೊಂಡಿರುವುದಾಗಿ ಆರೋಪಿಸಲಾಗಿದೆ.
ಗ್ರೆಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೋರೇಷನ್ ಮತ್ತು ಇತರ ಅಧಿಕಾರಿಗಳಿಂದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ತಮ್ಮ ಪರಾಭವ ಬಳಸಿ ಆರೋಪಗಳನ್ನು ಎದುರಿಸಲಾಗುತ್ತದೆ. ಹೀಗಾಗಿ ಅತಿಕ್ರಮಣ ಕುರಿತಂತೆ ಕ್ರಮ ಕೈಗೊಳ್ಳಲು ಹಿನ್ನೆಡೆ ಉಂಟಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಕಟ್ಟಡ ಕೆಡವಲು ಬುಲ್ಡೋಜರ್ ಕಾರ್ಯಾಚರಣೆ ಆರಂಭಿಸಲಾಗಿದ್ದು ಸ್ಥಳದಲ್ಲಿ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಮೊಕ್ಕಾಂ ಹೂಡಿದ್ದಾರೆ.