ಫ್ರೆಂಚ್ ರೈಸ್ ಪ್ರಕರಣ: ವಿಚಾರಣೆಗೆ ತಡೆ
ಬೆಂಗಳೂರು,ಅ.೨೩-ಪತ್ನಿಗೆ ಫ್ರೆಂಚ್ ಫ್ರೈಸ್ ತಿನ್ನಲು ಬಿಡಲಿಲ್ಲ ಎಂಬ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೪೯೮ ಎ (ಕ್ರೌರ್ಯ) ಅಡಿಯಲ್ಲಿ ಆರೋಪ ಎದುರಿಸುತ್ತಿರುವ ವ್ಯಕ್ತಿಯೊಬ್ಬನಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ತನ್ನ ಸಹಾಯ ಹಸ್ತ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ, ವ್ಯಕ್ತಿಯ ವಿರುದ್ಧದ ದೂರು ತುಂಬಾ ಕ್ಷುಲ್ಲಕವಾಗಿದೆ, ಆದ್ದರಿಂದ ಪ್ರಕರಣದಲ್ಲಿ ಅವರ ವಿರುದ್ಧದ ತನಿಖೆಯನ್ನು ತಡೆಹಿಡಿಯಲಾಗಿದೆ.
ವ್ಯಕ್ತಿಯ ವಿರುದ್ಧದ ದೂರು ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿದೆ ಮತ್ತು ಪ್ರಕರಣದಲ್ಲಿ ಅವರ ವಿರುದ್ಧದ ತನಿಖೆಗೆ ತಡೆ ನೀಡಿದ್ದಾರೆ.
ಹೆರಿಗೆಯ ನಂತರ ತನ್ನ ಹೆಂಡತಿಗೆ ಫ್ರೆಂಚ್ ಫ್ರೈಸ್ ತಿನ್ನಲು ಅವಕಾಶ ನೀಡದಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೪೯೮ಎ(ಕ್ರೌರ್ಯ) ಅಡಿಯಲ್ಲಿ ಒಬ್ಬ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ಗಂಡನ ವಿರುದ್ಧ ಯಾವುದೇ ತನಿಖೆಯನ್ನು ಅನುಮತಿಸುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗ ವಾಗುತ್ತದೆ.ಆದ್ದರಿಂದ ಪತಿ ವಿರುದ್ಧದ ಎಲ್ಲಾ ತನಿಖೆಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನಿರ್ದೇಶನ ನೀಡಿದ್ದಾರೆ.