ಎಲ್ಲ ಅಮೆರಿಕನ್ನರ ಅಧ್ಯಕ್ಷರಾಗುವ ಗುರಿ
ವಾಷಿಂಗ್ಟನ್,ಆ,೨೩- ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದ ಬೆನ್ನಲ್ಲೇ “ಎಲ್ಲಾ ಅಮೆರಿಕನ್ನರಿಗೆ ಅಧ್ಯಕ್ಷರಾಗುವ ಗುರಿ ನನ್ನದು ಎಂದು ಕರೆಸಿಕೊಳ್ಳುವ ಪ್ರತಿಜ್ಞೆ ಮಾಡಿದ್ದಾರೆ.
ನವೆಂಬರ್‌ನಲ್ಲಿ ರಿಪಬ್ಲಿಕನ್ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಖಾಮುಖಿಯಾಗಲಿದ್ದು ಮೊದಲ ಕಪ್ಪು ವರ್ಣೀಯ ಮಹಿಳೆ ಅಧ್ಯಕ್ಷರಾಗಿರುವ ಹಿರಿಮೆಗೆ ಪಾತ್ರರಾಗುವ ವಿಶ್ವಾಸವಿದೆ
೫೯ ವರ್ಷ ವಯಸ್ಸಿನ ಭಾರತೀಯ-ಅಮೆರಿಕನ್ ಕಮಲಾ ಹ್ಯಾರೀಸ್ ಅವರು ಅಮೆರಿಕಾದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಈ ಬಾರಿಯ ಚುನಾವಣೆ ಮಹತ್ವದ ಪಾತ್ರ ವಹಿಸಲಿದೆ ಎಂದಿದ್ದಾರೆ.
ಅಮೇರಿಕಾದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಅಸಾಮಾನ್ಯ ತಿರುವುಗಳ ನಂತರ ಮತದಾರರನ್ನು ತಲುಪಿದಾಗ “ಹೊಸ ದಾರಿ” ಪ್ರತಿಜ್ಞೆ ಮಾಡಬೇಕಾಗಿತ್ತು. “ ವಿವಿಧ ರಾಜಕೀಯ ದೃಷ್ಟಿಕೋನಗಳ ಜನರು ವೀಕ್ಷಿಸುತ್ತಿದ್ದಾರೆಂದು ನನಗೆ ತಿಳಿದಿದೆ. ಅದನ್ನು ತಿಳಿದುಕೊಳ್ಳಲು ಮುಂದಾಗಿರುವುದಾಗಿ ಕಮಲಾ ಹ್ಯಾರೀಸ್ ತಿಳಿಸಿದ್ದಾರೆ.
ತಾವು ಎಲ್ಲಾ ಸಮುದಾಗಳ ಅಧ್ಯಕ್ಷರಾಗಲು ಭರವಸೆ ನೀಡುತ್ತೇನೆ. ಯಾವುದೇ ವರ್ಣಬೇಧದ ಮಾತೇ ಬರುವುದಿಲ್ಲ ಎಂದು ಅವರು ಅಮೇರಿಕಾದ ಎಲ್ಲಾ ಜನರಿಗೆ ಭರವಸೆ ನೀಡಿದ್ದಾರೆ
ಪ್ರಮುಖ ಪಕ್ಷವೊಂದಕ್ಕೆ ಮೊದಲ ಕಪ್ಪು ಮಹಿಳೆ ನಾಮನಿರ್ದೇಶಿತ, ಕಮಲಾ ಹ್ಯಾರಿಸ್ ಅವರಿಗೆ ಅಮೇರಿಕಾದ ಅಧ್ಯಕ್ಷ ೮೧ ವರ್ಷದ ಅಧ್ಯಕ್ಷ ಜೋ ಬಿಡೆನ್ ಸೇರಿದಂತೆ ಅನೇಕ ಮಾಜಿ ಅಧ್ಯಕ್ಷರಿಂದ ವ್ಯಾಪಕ ಬೆಂಬಲ ಸಿಕ್ಕಿದೆ,
ಜೊತೆಗೆ ಅಮೇರಿಕಾದ ನಾಗರಿಕರಿಂದ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜೊತೆಗೆ ನಿರೀಕ್ಷಗೂ ಮೀರಿದ ದೇಣಿಗೆ ಹರಿದು ಬರುತ್ತಿದೆ,ಇದು ಕಮಲಾ ಹ್ಯಾರೀಸ್ ಅವರನ್ನು ಗೆಲುವಿನ ವಿಶ್ವಾಸ ಹೆಚ್ಚು ಮಾಡಿದೆ.
ಪಾಪ್ ತಾರೆ ಪಿಂಕ್ ಮತ್ತು ಕಂಟ್ರಿ ಬ್ಯಾಂಡ್ ದಿ ಚಿಕ್ಸ್ ಸೇರಿದಂತೆ ವಿಶೇಷ ಸಂಗೀತ ಅತಿಥಿಗಳು ಪ್ರದರ್ಶನ ನೀಡಲು ಸಾಲುಗಟ್ಟಿ ನಿಂತು ಕಮಲಾ ಹ್ಯಾರೀಸ್ ಅವರಿಗೆ ಬೆಂಬಲ ಸಿಕ್ಕಿದೆ