ಕಮಲಾ ಹ್ಯಾರಿಸ್ ಗೆಲುವಿಗೆ ಒಬಾಮಾ ಮನವಿ
ಚಿಕಾಗೋ,ಆ.೨೩- ಈ ಬಾರಿಯ ಅಮೆರಿಕಾ ಆಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರೀಸ್ ಅವರನ್ನು ಗೆಲ್ಲಿಸುವ ಮೂಲಕ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಿರಿ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಭಾರಕ್ ಒಬಾಮ್ ಇಂದಿಲ್ಲಿ ಅಮೆರಿಕಾದ ಜನರಿಗೆ ಮನವಿ ಮಾಡಿದ್ದಾರೆ.
ಚಿಕಾಗೋದಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕಮಲಾ ಹ್ಯಾರಿಸ್ ಉತ್ತಮ ವ್ಯಕ್ತಿ, ಜೊತೆಗೆ ಅಮೇರಿಕಾದ ಜನರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಹೊಂದಿರುವುವರು ಹೀಗಾಗಿ ಅವರನ್ನು ಚುನಾವಣೆಯಲ್ಲಿ ಜನರು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಕಮಲಾ ಹ್ಯಾರಿಸ್ ಅವರ ಪ್ರಬಲ ಆಕಾಂಕ್ಷಿ, ಇಂತಹ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಹೀಗಾಗಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ?ಷ ಡೊನಾಲ್ಡ್ ಟ್ರಂಪ್ ಅವರನ್ನು ತಿರಸ್ಕರಿಸಿ ಎಂದು ಮನವಿ ಮಾಡಿದ್ದಾರೆ.
ಹಾಲಿ ಉಪಾಧ್ಯಕ್ಷೆಯಾಗಿರುವ ಕಮಲಾ ಹ್ಯಾರಿಸ್ ನೇತೃತ್ವದಲ್ಲಿ ಅಮೆರಿಕ ಹೊಸ ಅಧ್ಯಾಯಕ್ಕೆ ಸಿದ್ಧವಾಗಿದೆ ಎಂದು ಪ್ರತಿಪಾದಿಸಿದರು, ಡೋನಾಲ್ಡ್ ಟ್ರಂಪ್ ಅವರ ವಿಧಾನ ಹಳಸಿದ ಮತ್ತು ನಿಷ್ಪರಿಣಾಮಕಾರಿ ಅವರನ್ನು ಆಯ್ಕೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಅಮೆರಿಕದ ಮೊದಲ ಕರಿಯ ಅಧ್ಯಕ್ಷ ಬರಾಕ್ ಒಬಾಮಾ ಅವರು ನವೆಂಬರ್ ೫ ರಂದು ಮೊದಲ ಮಹಿಳೆ ಮತ್ತು ಮೊದಲ ಕಪ್ಪು ಮತ್ತು ದಕ್ಷಿಣ ಏಷ್ಯಾದ ಯುಎಸ್ ಅಧ್ಯಕ್ಷರಾಗಿ ಇತಿಹಾಸವನ್ನು ನಿರ್ಮಿಸಲು ಪ್ರಯತ್ನಿಸುತ್ತಿರುವಾಗ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸುವಂತೆ ಪ್ರತಿನಿಧಿಗಳನ್ನು ಒತ್ತಾಯಿಸಿದರು.
“ನನಗೆ ನಿಮ್ಮ ಬಗ್ಗೆ ಗೊತ್ತಿಲ್ಲ, ಆದರೆ ನಾನು ಉರಿಯುತ್ತಿರುವ ಭಾವನೆ!” ಒಬಾಮಾ ಅವರು ತಮ್ಮ ವಿಶಿಷ್ಟ ಉತ್ಸಾಹದಿಂದ ಜನರನ್ನು ಪ್ರೋತ್ಸಾಹಿಸಿದ್ದಾರೆ
ಕಮಲಾ ಹ್ಯಾರಿಸ್ ಅವರನ್ನು ಹೊಗಳಿದ ಅವರು, “ಅಮೆರಿಕ ಹೊಸ ಅಧ್ಯಾಯಕ್ಕೆ ಸಿದ್ಧವಾಗಿದೆ. ಉತ್ತಮ ಕಥೆಗಾಗಿ ಅಮೆರಿಕ ಸಿದ್ಧವಾಗಿದೆ. ಕಮಲಾ ಹ್ಯಾರಿಸ್ ಅಧ್ಯಕ್ಷರಾಗಲು ಸಿದ್ಧರಿದ್ದೇವೆ, ಇದೀಗ ಜನರು ಕೂಡ ಕೈಜೋಡಿಸಬೇಕು ಎಂದಿದ್ದಾರೆ.