ದೋಣಿ ಮುಳುಗಿ ೭೮ ಜಲಸಮಾಧಿ
ಕಿನ್ಶಾಸಾ,ಅ.೪-ಮಧ್ಯ ಆಫ್ರಿಕಾದ ಕಾಂಗೋದ ಪೂರ್ವ ಭಾಗದಲ್ಲಿರುವ ಕಿವು ಸರೋವರದಲ್ಲಿ ೨೭೮ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮುಳುಗಿ ಗುರುವಾರ ಕನಿಷ್ಠ ೭೮ ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ.
ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಈ ಘಟನೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸ್ಥಳೀಯ ಪ್ರಾಂತ್ಯದ ಗವರ್ನರ್ ಹೇಳಿದ್ದಾರೆ.ಸ್ಥಳೀಯ ಜನರು ಮತ್ತು ರಕ್ಷಣಾ ತಂಡಗಳ ಸಹಾಯದಿಂದ ನೀರಿನಲ್ಲಿ ಮುಳುಗಿದ ೫೦ ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕಿಟುಕು ಬಂದರಿನಿಂದ ಕೆಲವು ಮೀಟರ್ ದೂರದಲ್ಲಿ ದೋಣಿ ಮುಳುಗಿತು. ದೋಣಿ ದಕ್ಷಿಣ ಕಿವು ಪ್ರಾಂತ್ಯದ ಮಿನೋವಾದಿಂದ ಉತ್ತರ ಕಿವು ಪ್ರಾಂತ್ಯದ ಗೋಮಾಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಕಾಂಗೋದ ದಕ್ಷಿಣ ಕಿವು ಪ್ರಾಂತ್ಯದ ಮಿನೋದಿಂದ ಉತ್ತರ ಕಿವು ಪ್ರಾಂತ್ಯದ ಗೋಮಾ ಪ್ರದೇಶವನ್ನು ಸಂಪರ್ಕಿಸುವ ಸರೋವರಕ್ಕೆ ನಿನ್ನೆ ಹೆಚ್ಚಿನ ಸಂಖ್ಯೆಯ ಜನರು ದೋಣಿಯಲ್ಲಿ ತೆರಳಿದ್ದಾರೆ.
ಕೆರೆಯ ಪಕ್ಕದಲ್ಲಿರುವ ಕಿಟುಗು ಬಂದರಿನ ಬಳಿ ಹೋದಾಗ ಹೆಚ್ಚು ಭಾರ ಹೊರಲಾಗದೆ ದೋಣಿ ಮಗುಚಿ ಬಿದ್ದಿದೆ. ಇದರಲ್ಲಿ ೬೦ಕ್ಕೂ ಹೆಚ್ಚು ಪ್ರಯಾಣಿಕರು ಕೆರೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ನೀರಿನಲ್ಲಿ ಕೊಚ್ಚಿ ಹೋಗಿದ್ದ ೧೦ ಮಂದಿಯನ್ನು ರಕ್ಷಿಸಲಾಗಿದೆ. ಅಪಘಾತ ಸಂಭವಿಸಿದ ಕೆರೆಯಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ.
ಕಾಂಗೋದ ಹೆಚ್ಚಿನ ಭಾಗಗಳಲ್ಲಿ ಜನರು ದೋಣಿ ಸಾರಿಗೆಯನ್ನು ಅವಲಂಬಿಸಿದ್ದಾರೆ. ಸ್ಥಳೀಯರು ತಮ್ಮ ಜೀವನೋಪಾಯವನ್ನು ಉಳಿಸಿಕೊಳ್ಳಲು ಕೆಲವೊಮ್ಮೆ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
ಇದರಿಂದ ಸಾಕಷ್ಟು ದೋಣಿ ಅಪಘಾತಗಳು ನಡೆಯುತ್ತಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.