ಕೇಜ್ರಿಯಿಂದ ಅಧಿಕೃತ ನಿವಾಸ ತೆರವು
ನವದೆಹಲಿ,ಅ. ೪- ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಅಧಿಕೃತ ನಿವಾಸವನ್ನು ಖಾಲಿ ಮಾಡಿ ದೆಹಲಿಯ ಲುಟೈನ್ಸ್ ನಲ್ಲಿರುವ ಸಂಸದರ ಬಂಗಲೆಗೆ ತೆರಳಿದ್ದಾರೆ.
ಕಳೆದ ತಿಂಗಳು ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರೀವಾಲ್ ರಾಜೀನಾಮೆ ನೀಡಿದ್ದರು. ಅವರು ತಮ್ಮ ಕುಟುಂಬದೊಂದಿಗೆ ಪಂಜಾಬ್ ರಾಜ್ಯ ಸಭಾ ಸಂಸದ ಅಶೋಕ್ ಮಿತ್ತಲ್ ಅವರ ಅಧಿಕೃತ ನಿವಾಸದಲ್ಲಿ ಮಂಡಿ ಹೌಸ್ ಬಳಿಯ ಫೀರೋಜ್ ಷಾ ರಸ್ತೆಯಲ್ಲಿರುವ ನಿವಾಸದಲ್ಲಿ ವಾಸವಿರಲಿದ್ದಾರೆ. ಈ ನಿವಾಸದಲ್ಲಿ ರವಿಶಂಕರ್ ಶುಕ್ಲಾ ಲೈನ್ ನಲ್ಲಿರುವ ಎಎಪಿ ಕೇಂದ್ರ ಕಚೇರಿಗೆ ಹತ್ತಿರವಾಗಿದೆ.
ನಿನ್ನೆ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ರಾಜೇಂದ್ರ ಪ್ರಸಾದ್ ರಸ್ತೆಯಲ್ಲಿರುವ ಬಂಗಲೆಗೆ ಸ್ಥಳಾಂತರಗೊಂಡಿದ್ದಾರೆ. ಈ ಮನೆ ಎಎಪಿ ರಾಜ್ಯಸಭಾ ಸಂಸದ ಹರ್ಭಜನ್ ಸಿಂಗ್ ಅವರ ಅಧಿಕೃತ ನಿವಾಸ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಕೇಜ್ರೀವಾಲ್ ೨೦೧೫ ರಿಂದ ಮುಖ್ಯಮಂತ್ರಿಯಾಗಿ ವಾಸಿಸುತ್ತಿದ್ದ ಉತ್ತರ ದೆಹಲಿಯ ಸಿವಿಲ್ ಲೈನ್ಸ್ ೬ ಫ್ಲಾಗ್ ಸ್ಟಾಫ್ ರಸ್ತೆಯನ್ನು ಬಿಡಲು ನಿರ್ಧರಿಸಿದ ನಂತರ ಸಂಸದರು, ಶಾಸಕರು ಮತ್ತು ಕೌನ್ಸಿರ್‌ಗಳು ಸೇರಿದಂತೆ ಹಲವಾರು ಪಕ್ಷದ ಮುಖಂಡರು ಕೇಜ್ರಿವಾಲ್ ಗೆ ತಮ್ಮ ಮನೆಗಳನ್ನು ನೀಡಿದ್ದರು.
ಕೇಜ್ರೀವಾಲ್‌ಅವರ ವಿಧಾನಸಭಾ ಕ್ಷೇತ್ರವೂ ಆಗಿರುವ ನವದೆಹಲಿ ಪ್ರದೇಶದಲ್ಲಿ ವಾಸಿಸುತ್ತಿರುವ ಕೇಜ್ರೀವಾಲ್ ಅವರು ದೆಹಲಿ ಮತ್ತು ಇತರ ರಾಷ್ಟ್ರಗಳಲ್ಲಿ ಮುಂಬರುವ ಚುನಾವಣೆಗಾಗಿ ಎಎಪಿ ಪಕ್ಷದ ಮೇಲ್ಮಚಾರಣೆ ಮಾಡಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.