ಬೇಡಿಕೆ ಈಡೇರಿಕೆಗೆ ಪಿಡಿಒ ನೌಕರರ ಪ್ರತಿಭಟನೆ
ಬೆಂಗಳೂರು, ಅ. ೪- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ, ಸೇವೆ ಸ್ಥಗಿತಗೊಳಿಸಿ ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪಿಡಿಒ ಕಾರ್ಯದರ್ಶಿಗಳಿ, ಕರವಸೂಲಿಗಾರರು, ಗುಮಾಸ್ತರು, ಡಾಟಾ ಎಂಟ್ರಿ, ಆಪರೇಟರ್ ಗಳು, ನೀರಗಂಟಿಗಳು, ಜವಾನರು, ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ವಿವಿಧ ಸಿಬ್ಬಂದಿಗಳು ಬೃಹತ್ ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಸುವಂತೆ ಸರ್ಕಾರದ ಗಮನಸೆಳೆದರು.
ಪಿಡಿಒ ಹುದ್ದೆಯನ್ನು ಬಿ ದರ್ಜೆಗೆ ಉನ್ನತೀಕರಿಸುವುದು, ಪಿಡಿಒಗಳ ಜೇಷ್ಠತಾ ಪಟ್ಟಿ ಸಿದ್ಧತಾ ಪಡಿಸಿ ಬಡ್ತಿಗೆ ಕ್ರಮಕೈಗೊಳ್ಳುವುದು. ವಿವಿಧ ವೃಂದಗಳ ನೌಕರರಿಗೆ ಸಕಾಲಕ್ಕೆ ಬಡ್ತಿ ನೀಡುವುದು. ರಾಜ್ಯ ವಿಮೆ ಮತ್ತು ಭವಿಷ್ಯ ನಿಧಿನೀಡುವುದು. ನೇರನೇಮಕಾತಿಯಲ್ಲಿ ಆದ್ಯತೆ ನೀಡುವುದು. ಜಿ.ಪಂ ಸಿಇಓ ಅಧಿಕಾರಿ ಹುದ್ದೆಗಳಲ್ಲಿ ಪಂಚಾಯತ್ ರಾಜ್ ಇಲಾಖೆ ಗೆಜೆಟ್ ಅಧಿಕಾರಿಗಳಿಗೆ ಮೀಸಲಿಡಬೇಕೆಂದು ಒತ್ತಾಯಿಸಿದರು.
ಉಳಿದಂತೆ ಪಂಚಾಯತ್ ರಾಜ್ ಕಾಯ್ದೆನ್ವಯ ಜವಾಬ್ದಾರಿ ನಕ್ಷೆಯಂತೆ ಗ್ರಾ.ಮ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಅಧಿಕಾರ ನೀಡುವುದು. ಸ್ಥಾಯಿ ಸಮಿತಿಗೆ ಹೆಚ್ಚಿನ ಅಧಿಕಾರ ನೀಡುವುದು. ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ರಾಜ್ಯ ಶಿಷ್ಟಾಚಾರ ವ್ಯಾಪ್ತಿಗೆ ತರುವುದು. ಕೇರಳ ಮಾದರಿಯಲ್ಲಿ ವೇತನ ಸೇರಿದಂತೆ ಹಲವು ಬೇಡಿಕೆಗಳನ್ನು ಗ್ರಾ.ಪಂ, ಸದಸ್ಯರ ಒಕ್ಕೂಟ ಸರ್ಕಾರದ ಮುಂದಿಟ್ಟಿದೆ.
ಒಂದು ವೇಳೆ ಸರ್ಕಾರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು