200 ಕೋಟಿ ಸಂಗ್ರಹಿಸಿದ ‘ದೇವರ” ಚಿತ್ರ
ಹೈದರಾಬಾದ್.ಅ.೩- ಜೂನಿಯರ್ ಎನ್‌ಟಿಆರ್ ಅಭಿನಯದ “ದೇವರ” ಭಾಗ -೧ ಚಿತ್ರ ಬಿಡುಗಡೆಯಾದ ದಿನದಿಂದ ಇಲ್ಲಿಯ ತನಕ ೨೦೦ ಕೋಟಿ ರೂಪಾಯಿ ಸಂಗ್ರಹ ಮಾಡಿ ಚಿತ್ರಮಂದಿರದಲ್ಲಿ ಮುನ್ನೆಡೆದಿದೆ.
ಮೊದಲ ವಾರದಲ್ಲಿ ನಿಧಾನಗತಿಯ ಹಣ ಸಂಗ್ರಹದ ನಂತರ ಎರಡನೇ ವಾರದಲ್ಲಿ ಗಳಿಕೆ ಹೆಚ್ಚಿಸಿಕೊಂಡ ದೇವರ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದಿನದಿಂದ ದಿನಕ್ಕೆ ಹೆಚ್ಚುಂ ಸಂಗ್ರಹ ಮಾಡುತ್ತಿದೆ. ಗಾಂಧಿ ಜಯಂತಿಯಂದು ಚಿತ್ರ ಪ್ರತಿಷ್ಠಿತ ೨೦೦ ಕೋಟಿ ರೂಪಾಯಿ ಕ್ಲಬ್‌ಗೆ ಸೇರಿದೆ
ಜೂನಿಯರ್ ಎನ್‌ಟಿಆರ್ ಮತ್ತು ಜಾನ್ವಿ ಕಪೂರ್ ಅಭಿನಯದ ದೇವರ ಭಾಗ ೧ ಗಾಂಧಿ ಜಯಂತಿಯ ರಜೆಯ ಗರಿಷ್ಠ ಪ್ರಯೋಜನ ಪಡೆದುಕೊಂಡಿದೆ, ದೇಶೀಯ ಮಾರುಕಟ್ಟೆಯಲ್ಲಿ ೨೦೦ ಕೋಟಿ ಕ್ಲಬ್ ಗೇ ಸೇರಿದ ಹೆಗ್ಗಳಿಕೆಗೆ ಪಾತ್ರವಾಗಿದೆ
ಚಿತ್ರ ಬುಧವಾರದಂದು ಸುಮಾರು ೨೦ ಕೋಟಿ ರೂಪಾಯಿಗ ಗಳಿಸಿತು, ಆರು ದಿನಗಳ ಥಿಯೇಟ್ರಿಕಲ್ ಬಿಡುಗಡೆಯ ನಂತರ ಭಾರತದಲ್ಲಿ ಅದರ ಒಟ್ಟು ನಿವ್ವಳ ಸಂಗ್ರಹಗಳು ೨೦೫ ಕೋಟಿ ರೂಪಾಯಿ ದಾಟಿದೆ. ಯಶಸ್ವಿ ಆರಂಭದ ವಾರಾಂತ್ಯದ ನಂತರ, ದೇವರ ಭಾಗ ೧ ಬಾಕ್ಸ್ ಆಫೀಸ್‌ನಲ್ಲಿ ಮಂದಗತಿಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಭರತ್ ಅನೆ ನೇನು ಮತ್ತು ಜನತಾ ಗ್ಯಾರೇಜ್‌ನಂತಹ ಬ್ಲಾಕ್‌ಬಸ್ಟರ್ ಚಿತ್ರ ನೀಡಿರುವ ಕೊರಟಾಲ ಶಿವ ಈ ಚಿತ್ರ ನಿರ್ದೇಶಿಸಿದ್ದಾರೆ ಮತ್ತು ಜೂನಿಯರ್ ಎನ್‌ಟಿಆರ್ ಅವಳಿ ಪಾತ್ರಗಳಲ್ಲಿ ನಟಿಸಿದ್ದಾರೆ. ನಟ ತಂದೆ ಮತ್ತು ಮಗ ಇಬ್ಬರನ್ನೂ ಡಬಲ್ ಆಕ್ಷನ್ ಮತ್ತು ಉತ್ಸಾಹದಲ್ಲಿ ನಟಿಸುತ್ತಿದ್ದಾರೆ.
ಬಾಲಿವುಡ್ ತಾರೆ ಜಾನ್ವಿ ಕಪೂರ್ ದಕ್ಷಿಣದಲ್ಲಿ ಪ್ರಮುಖ ಪಾತ್ರದೊಂದಿಗೆ ಪಾದಾರ್ಪಣೆ ಮಾಡಿದ್ದಾರೆ, ಆದರೆ ಸೈಫ್ ಅಲಿ ಖಾನ್ ಮತ್ತೊಮ್ಮೆ ಆದಿಪುರುಷ ನಂತರ ಪ್ಯಾನ್-ಇಂಡಿಯಾ ಚಲನಚಿತ್ರದಲ್ಲಿ ಎರಡನೇ ಬಾರಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಹೆಜ್ಜೆ ಹಾಕಿದ್ದಾರೆ.