ಹ್ಯಾರೀಸ್‌ಗೆ ೨೪ ದಶಲಕ್ಷ ದಾನಿಗಳಿಂದ ದೇಣಿಗೆ
ವಾಷಿಂಗ್ಟನ್, ಆ,೨೨- ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ನಡುವೆ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರೀಸ್ ಅವರಿಗೆ ಕಳೆದ ೧೧ ದಿನಗಳಲ್ಲಿ ೨.೪ ದಶಲಕ್ಷಕ್ಕಿಂತಲೂ ಹೆಚ್ಚು ದಾನಿಗಳು ಚುನಾವಣಾ ದೇಣಿಗೆ ನೀಡಿದ್ದಾರೆ.
ಹಾಲಿ ಅಧ್ಯಕ್ಷರಾಗಿರುವ ಜೋಬೈಡೆನ್ ಅವರ ಕಳೆದ ಬಾರಿಯ ಚುನಾವಣಾ ಪ್ರಚಾರದ ಅವಧಿಗಿಂತ ಸುಮಾರು ೨೦೦,೦೦೦ ಹೆಚ್ಚು ಮಂದಿ ದೇಣಿಗೆದಾರರು ಕೊಡುಗೆ ನೀಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಇತ್ತೀಚಿನ ಫೆಡರಲ್ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ದಾನಿಗಳ ಸಂಖ್ಯೆ ಹೆಚ್ಚಾಗಿದೆ ಎನ್ನುವ ಮಾಹಿತಿ ಬಹಿರಂಗವಾಗಿದ್ದು ಹಾಲು ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅವರ ಪ್ರಚಾರ ಮತ್ತು ಡೆಮಾಕ್ರಟಿಕ್ ಪಕ್ಷಕ್ಕೆ ವೈಯಕ್ತಿಕ ಕೊಡುಗೆಗಳು ಸುಮಾರು ೨೦೧ ಮಿಲಿಯನ್ ಡಾಲರ್ ನಷ್ಟು ಹೆಚ್ಚಳವಾಗಿದೆ
ಡೇಟಾದ ಬ್ಲೂಮ್‌ಬರ್ಗ್ ವಿಶ್ಲೇಷಣೆಯ ಪ್ರಕಾರ, ಮೂರನೇ ಎರಡರಷ್ಟು ಮಂದಿ ಕಮಲಾ ಹ್ಯಾರಿಸ್ ದಾನಿಗಳು ದೇಣಿಗೆ ನೀಡಿದ್ದಾರೆ. ಜೋ ಬೈಡೆನ್ ಅವರ ಪ್ರಚಾರ ಅಥವಾ ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿಗೆ ಇಷ್ಟೊಂದು ದೊಡ್ಡ ಮೊತ್ತದ ದೇಣಿಗೆ ಬಂದಿರಲಿಲ್ಲ ಎಂದೂ ಹೇಳಲಾಗಿದೆ.
ಏಳು ಯುದ್ಧಭೂಮಿ ರಾಜ್ಯಗಳಲ್ಲಿ, ಜಾರ್ಜಿಯಾ, ಉತ್ತರ ಕೆರೊಲಿನಾ ಮತ್ತು ವಿಸ್ಕಾನ್ಸಿನ್‌ನಲ್ಲಿ ಹ್ಯಾರಿಸ್ ದೊಡ್ಡ ದಾನಿಗಳ ಸಂಖ್ಯೆ ಹೆಚ್ಚಳವಾಗಿದೆ. ಅದರಲ್ಲಿಯೂ ಅರಿಝೋನಾದಲ್ಲಿ ಗಮನಾರ್ಹ ಹೆಚ್ಚಳ ಸೇರಿದಂತೆ ಜೋ ಬೈಡನ್ ಗೆ ಹೋಲಿಸಿದರೆ ಪ್ರತಿ ರಾಜ್ಯದಲ್ಲಿಯೂ ದೊಡ್ಡ ಸರಾಸರಿ ದೇಣಿಗೆ ಹರಿದು ಬಂದಿದೆ.
ಜುಲೈ ೨೧ ರಂದು ಅವರು ಜೋ ಬೈಡೆನ್ ಅವರು ಸಂಭಾವ್ಯ ಡೆಮಾಕ್ರಟಿಕ್ ನಾಮಿನಿಯಾಗಿ ಬದಲಾಯಿಸಿದಾಗ, ಒಂದೇ ದಿನದ ನಿಧಿಸಂಗ್ರಹದ ದಾಖಲೆ ಮಾಡಿದೆ. ಅಮೇರಿಕಾ ಚುನಾವಣೆಗೆ ಇನ್ನೂ ೧೧ ವಾರ ಬಾಕಿ ಇರುವಂತೆ ಮತ್ತಷ್ಟು ದೇಣಿಗೆ ಹರಿದು ಬರುವ ಸಾಧ್ಯತೆ ಇದೆ ಎನ್ನಲಾಗಿದೆ.