೭ ಉಗ್ರರ ಬಂಧನ: ಶಸ್ತ್ರಾಸ್ತ್ರ, ಮದ್ದುಗುಂಡು ವಶ
ರಾಚಿ,ಆ.೨೨- ಜಾರ್ಖಂಡ್‌ನ ೧೪ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಭಯೋತ್ಪಾದಕ ನಿಗ್ರಹ ದಳ ೭ ಭಯೋತ್ಪಾದಕರನ್ನು ಬಂಧಿಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ
ಲೋಹರ್ಡಗಾದಿಂದ ಬಂಧಿತ ಉಗ್ರರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಟಿಎಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
,ಜಾರ್ಖಂಡ್ ಎಟಿಎಸ್ ೧೪ ಸ್ಥಳಗಳಲ್ಲಿ ದಾಳಿ ನಡೆಸಿ ಏಳು ಭಯೋತ್ಪಾದಕರನ್ನು ಬಂಧಿಸಿರುವ ಪ್ರಕರಣ ರಾಜ್ಯದ ಇತಿಹಾಸಲ್ಲಿ ದೊಡ್ಡ ಪ್ರಕರಣ ಇದಾಗಿದೆ. ಎಟಿಎಸ್ ತಂಡ ಲೋಹರ್ದಗಾದ ಕೈರೋ, ಹಜಾರಿಬಾಗ್‌ನ ಪೆಲಾವಲ್ ಮತ್ತು ಇತರ ಹಲವು ಜಿಲ್ಲೆಗಳಲ್ಲಿ ದಾಳಿ ಮಾಡುವ ಮೂಲಕ ಎಲ್ಲಾ ಭಯೋತ್ಪಾದಕರನ್ನು ಬಂಧಿಸಿದೆ.
ಲೋಹರ್ಡಗಾದಿಂದ ಬಂಧಿತ ಉಗ್ರರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಉಗ್ರರ ವಿಚಾರಣೆ ನಡೆಯುತ್ತಿದೆ.
ಕೆಲ ದಿನಗಳ ಹಿಂದೆ ಜಾರ್ಖಂಡ್‌ನ ಪಲಮು ಜಿಲ್ಲೆಯಲ್ಲಿ ಇಬ್ಬರು ಮಾವೋವಾದಿಗಳನ್ನು ಬಂಧಿಸಲಾಗಿತ್ತು. ಸಂಜೆ ಹುಸೇನಾಬಾದ್ ಪ್ರದೇಶದ ಪಾಹಿ ಗ್ರಾಮದಿಂದ ಅವರನ್ನು ಬಂಧಿಸಲಾಯಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ರೀಷ್ಮಾ ರಮೇಶನ್ ತಿಳಿಸಿದ್ದಾರೆ.
ಮಾವೋವಾದಿಗಳನ್ನು ಪ್ರಸಿದ್ಧ ಪರ್ಹಯ್ಯ (೨೭) ಮತ್ತು ದೌಲತ್ ಯಾದವ್ (೩೦) ಎಂದು ಗುರುತಿಸಲಾಗಿದೆ. ಅವರ ಬಳಿಯಿಂದ ಬಂದೂಕುಗಳು, ಪಿಸ್ತೂಲ್‌ಗಳು ಮತ್ತು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.