ಆನ್‌ಲೈನ್‌ನಲ್ಲಿ ೧೨ ಲಕ್ಷ ಕಳಕೊಂಡ ಮಹಿಳೆ
ತಿರುವನಂತಪುರಂ,ಆ.೨೧-ಕೇರಳದಲ್ಲಿ ಮತ್ತೆ ಸೈಬರ್ ವಂಚನೆ ನಡೆದಿದೆ . ಆನ್‌ಲೈನ್‌ನಲ್ಲಿ ಮಲಯಾಳಿ ಮಹಿಳೆಯಿಂದ ೧೨ ಲಕ್ಷ ರೂಪಾಯಿ ಸುಲಿಗೆ ಮಾಡಲಾಗಿದೆ. ಕಸ್ಟಮ್ಸ್ ಡ್ಯೂಟಿ ಅಧಿಕಾರಿಗಳಂತೆ ನಟಿಸಿ ವಂಚನೆ ಮಾಡಲಾಗಿದೆ. ವರದಿ ಪ್ರಕಾರ ಕೇರಳದ ಮಹಿಳೆಯೊಬ್ಬರು ಈ ವಂಚನೆಗೆ ಸಿಲುಕಿ ೧೨ ಲಕ್ಷ ರೂ.ಕಳೆದುಕೊಂಡಿದ್ದಾರೆ. ಮಹಿಳೆಗೆ ಕಸ್ಟಮ್ಸ್ ಅಧಿಕಾರಿಗಳು ಎಂದು ಹೇಳಿ ಕರೆ ಮಾಡಲಾಗಿದೆ. ಅದರಲ್ಲಿ ಕರೆ ಮಾಡಿದವರು ಮಹಿಳೆಗೆ ಉಡುಗೊರೆ ಬಂದಿದೆ, ಅದಕ್ಕೆ ಕಸ್ಟಮ್ಸ್ ಸುಂಕದ ಹೆಸರಿನಲ್ಲಿ ೧೫,೦೦೦ ರೂ. ಪಾವತಿಸಬೇಕು ಎಂದಿದ್ದಾರೆ.
ಆಗಲೇ ಭಾರೀ ಉಡುಗೊರೆಯ ನಿರೀಕ್ಷೆಯಲ್ಲಿದ್ದ ಮಹಿಳೆ ಕರೆ ಮಾಡಿದವರು ನಿಜವಾದ ಕಸ್ಟಮ್ಸ್ ಅಧಿಕಾರಿ ಎಂದು ತಪ್ಪಾಗಿ ಭಾವಿಸಿ ಮಹಿಳೆ ಹಣ ಪಾವತಿಸಿದ್ದಾರೆ.
ಆದರೆ, ಪಾರ್ಸೆಲ್ ನಲ್ಲಿ ೧೦ ಲಕ್ಷ ರೂಪಾಯಿ ಡಾಲರ್ ಸೇರಿದಂತೆ ಬೆಲೆಬಾಳುವ ವಸ್ತುಗಳು ಇವೆ ಎಂದು ಹೇಳಿ ಅದಕ್ಕೆ ಹೆಚ್ಚಿನ ತೆರಿಗೆ ಕಟ್ಟಲು ಹೇಳಿ ಹಣ ವಸೂಲಿ ಮಾಡಿದ್ದಾರೆ.ವಂಚಕರು ಹೇಳಿದಷ್ಟು ಮಹಿಳೆ ಹಣ ಪಾವತಿಸಿದ್ದಾಳೆ.
ಕೊನೆಗೆ ಸ್ನೇಹಿತೆಯೊಬ್ಬರು ಆಕೆಯನ್ನು ಎಚ್ಚರಿಸಿದಾಗ ಎಚ್ಚೆತ್ತ ಮಹಿಳೆಗೆ ಇದೊಂದು ಮೋಸದ ಜಾಲ ಎಂದು ಅರಿವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಬಂಧನಕ್ಕೆ ಜಾಲ ಬೀಸಿದ್ದಾರೆ.ಇಂದು ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಅಧಿಕೃತ ನೋಟಿಫಿಕೇಷನ್ ಎಂಬಂತೆ ಬಿಂಬಿಸಿ ಹೆಚ್ಚಿನ ಹಗರಣಗಳು ನಡೆಯುತ್ತಿವೆ. ಕಸ್ಟಮ್ಸ್ ಸ್ಕ್ಯಾಮ್ ಎಂಬ ಹೊಸ ಹೆಸರಿನಲ್ಲಿ ಆನ್‌ಲೈನ್ ಹಗರಣವನ್ನು ನಡೆಯುತ್ತಿದೆ.ಕಸ್ಟಮ್ಸ್ ಅಧಿಕಾರಿಗಳನ್ನು ಯಾಮಾರಿಸಿ ವಂಚನೆಗಳನ್ನು ನಡೆಸಲಾಗುತ್ತದೆ. ಇವರನ್ನು ನಂಬಿ ಅಪಾರ ಪ್ರಮಾಣದ ಹಣ ನೀಡಿ ಅನೇಕರು ಮೋಸ ಹೋಗಿದ್ದಾರೆ.
ಎಕ್ಸ್ ನಲ್ಲಿನ ಇತ್ತೀಚಿನ ಪೋಸ್ಟ್ ನಲ್ಲಿ ಕಸ್ಟಮ್ಸ್-ಸಂಬಂಧಿತ ವಂಚನೆಯ ಬಗ್ಗೆ ಇಂಟರ್ನೆಟ್ ಬಳಕೆದಾರರನ್ನು ಎಚ್ಚರಿಸಿದೆ. ಅಪರಾಧಿಗಳನ್ನು ವಿವರಿಸುವ ವಾಯ್ಸ್ ಕ್ಲಿಪ್ ಮೂಲಕ ವಂಚಕರು ಜನರನ್ನು ಹೇಗೆ ಮೋಸಗೊಳಿಸುತ್ತಾರೆ ಎಂಬುದನ್ನು ಪ್ರದರ್ಶಿಸುವ ವೀಡಿಯೊವನ್ನು ಈ ಪೋಸ್ಟ್ ಒಳಗೊಂಡಿದೆ. ಈ ಹಗರಣಗಳಲ್ಲಿ ತಂತ್ರಗಳು. ಅಂತಹ ಯೋಜನೆಗಳಿಗೆ ಬಲಿಯಾಗದಂತೆ ವ್ಯಕ್ತಿಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಹಾಯ ಮಾಡಲು ಅಗತ್ಯ ಮಾರ್ಗಸೂಚಿಗಳನ್ನು ಒದಗಿಸಲಾಗಿದೆ.