ಬಂಗಾಳದಲ್ಲಿ ರಾತ್ರಿ ಪಾಳಿ ಕೆಲಸ ಕಡಿತ
ಕೋಲ್ಕತಾ, ಆ.೨೧- ಕೊಲ್ಕತ್ತಾದ ಆರ್ ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕಣದ ನಂತರ. ಪಶ್ಚಿಮ ಬಂಗಾಳ ಸರ್ಕಾರ , ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸ ಕಡಿತ ಮಾಡಿ ಆದೇಶ ಹೊರಡಿಸಿದೆ.
ಆಗಸ್ಟ್ ೯ ರಂದು ಕಾರ್ ಆಸ್ಪತ್ರೆಯಲ್ಲಿ ನಡೆದ ಘಟನೆ ನಂತರ ಎಚ್ಚೆತ್ತುಕೊಂಡಿರುವ ಪಶ್ಚಿಮ ಬಂಗಾಳ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳಲ್ಲಿ ಮಹಿಳೆಯರಿಗೆ ರಾತ್ರಿ ಕರ್ತವ್ಯವನ್ನು ಕಡಿಮೆ ಮಾಡಲು ಸೂಚನೆ ನೀಡಿದೆ.
ಮಹಿಳೆಯರಿಗೆ ರಾತ್ರಿ ಕರ್ತವ್ಯವನ್ನು ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸಬಹುದು” ಎಂಬ ಆದೇಶದಿಂದ ಮಹಿಳೆಯರಿಗೆ ತುಸು ನೆಮ್ಮದಿ ತರಿಸಿದೆ.
೨೦೨೪ ರ ಏಪ್ರಿಲ್-ಜೂನ್‌ನಲ್ಲಿ ೧೫ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ನಗರ ಪ್ರದೇಶದ ಮಹಿಳೆಯರಿಗೆ ಕಾರ್ಮಿಕ ಬಲದ ಭಾಗವಹಿಸುವಿಕೆ ದರ ಶೇ. ೨೫.೨ ರಷ್ಟು ಇದ್ದು ಹೀಗಾಗಿ ಮಹಿಳೆಯರಿಗೆ ರಾತ್ರಿ ಪಾಳಿಯ ಕೆಲಸ ಕಡಿತ ಮಾಡಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರ ಆದೇಶ ಹೊರಡಿಸಿದೆ.
ಕಾರ್ಮಿಕ ಪಡೆ ಸಮೀಕ್ಷೆಯ ತ್ರೈಮಾಸಿಕ ಬುಲೆಟಿನ್ ಪ್ರಕಾರ, ಕೇಂದ್ರ ಮತ್ತು ರಾಜ್ಯಗಳಲ್ಲಿನ ಸರ್ಕಾರಗಳು ಮಹಿಳೆಯರಿಗೆ ಸುರಕ್ಷತೆ ಖಚಿತಪಡಿಸಿಕೊಳ್ಳಬೇಕು , ಆರೋಗ್ಯ ರಕ್ಷಣೆ ವೃತ್ತಿಪರರು, ಕಠಿಣ ಕೆಲಸ ಮಾಡುವ ಮತ್ತು ಫ್ಯಾಕ್ಟರಿ ಕೆಲಸಗಾರರು, ಕಾಲ್ ಸೆಂಟರ್ ಸಿಬ್ಬಂದಿ, ಆಟೋ ಚಾಲಕರು, ಹೋಟೆಲ್ ಕರ್ತವ್ಯಗಳು ಮತ್ತು ಪತ್ರಕರ್ತರು, ಸುರಕ್ಷಿತವಾಗಿರುವಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಕೆಲಸದಲ್ಲಿ ಸಮಯ ಕಡಿಮೆ ಮಾಡುವುದರಿಂದ ಮಹಿಳೆಯರು ಉದ್ಯೋಗ ಕಳೆದುಕೊಳ್ಳುತ್ತಾರೆ ಮತ್ತು ಅವರ ಆರ್ಥಿಕ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ. ಇತರ ಮಾರ್ಗಸೂಚಿಗಳು, ’ರಟ್ಟಿರರ್ ಶಾಥಿ ರಾತ್ರಿಯ ಸಹಾಯಕರು ಎಂಬ ಕಾರ್ಯಕ್ರಮದ ಭಾಗವಾಗಿ, ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು ಮತ್ತು ಶೌಚಾಲಯಗಳ ಕರೆ, ಸಿಸಿಟಿವಿಗಳೊಂದಿಗೆ ಸುರಕ್ಷಿತ ವಲಯಗಳನ್ನು ರಚಿಸುವುದು ಮತ್ತು ವಿಶೇಷ ಮೊಬೈಲ್ ಫೋನ್ ಅಪ್ಲಿಕೇಶನ್ ಈಗಾಗಲೇ ಇರಬೇಕು ಎಂದು ಸೂಚಿಸಿದೆ.
ಮಹಿಳೆಯರಿಗಾಗಿ ಶೌಚಾಲಯಗಳು, ಸಿಸಿಟಿವಿಗಳೊಂದಿಗೆ ಸುರಕ್ಷಿತ ವಲಯಗಳನ್ನು ರಚಿಸುವುದು ಮತ್ತು ವಿಶೇಷ ಮೊಬೈಲ್ ಫೋನ್ ಅಪ್ಲಿಕೇಶನ್ ಈಗಾಗಲೇ ಜಾರಿಯಲ್ಲಿರಬೇಕು ಎಂದು ಸೂಚಿಸಿದೆ.