ಅಧ್ಯಕ್ಷೀಯ ಚುನಾವಣೆ: ಹ್ಯಾರಿಸ್‌ಗೆ ವ್ಯಾಪಕ ಬೆಂಬಲ
ವಾಷಿಂಗ್ಟನ್, ಆ.೨೧- ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಅಧ್ಯಕ್ಷೀಯ ಚುನಾವಣೆ ತೀವ್ರ ಕಾವು ಪಡೆದುಕೊಳ್ಳುತ್ತಿದೆ. ಈ ನಡುವೆ ದಿನದಿಂದ ದಿನಕ್ಕೆ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರಿಗೆ ಬೆಂಬಲ ವ್ಯಕ್ತವಾಗುತ್ತಿದೆ.
ಅಮೆರಿಕಾ ಮಾಜಿ ಅಧ್ಯಕ್ಷ ಬಾರಕ್ ಒಬಾಮ ಅವರು ಕಮಲಾ ಹ್ಯಾರಿಸ್ ಅವರ ಪರ ಚುನಾವಣಾ ಅಖಾಡಕ್ಕಿಳಿದ್ದು ಕಮಲಾ ಹ್ಯಾರಿಸ್ ಅವರಿಗೆ ಮತ್ತಷ್ಟು ಶಕ್ತಿ ಬಂದಿದೆ.
ಅಮೆರಿಕಾದಲ್ಲಿ ಕರಿಯ ಮತ್ತು ಬಿಳಿಯ ವರ್ಣೀಯ ಸಮಸ್ಯೆಗಳು ಹೆಚ್ಚಾಗುತ್ತಿರುವ ನಡುವೆ ಕಮಲಾ ಹ್ಯಾರಿಸ್ ಕಪ್ಪು ವರ್ಣೀಯರಾಗಿದ್ದಾರೆ. ಹೀಗಾಗಿ ಅಮೆರಿಕಾದಲ್ಲಿ ಎರಡು ಭಾರಿ ಅಧ್ಯಕ್ಷರಾಗಿ ಇತಿಹಾಸ ಸೃಷ್ಟಿ ಮಾಡಿದ್ದ ಕರಿಯ ವರ್ಣೀಯ ಬಾರಕ್ ಒಬಾಮ ಅವರು ಕಮಲಾ ಹ್ಯಾರಿಸ್ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.
ಇದರ ಮದ್ಯೆ ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರು ಅಮೆರಿಕಾದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಕಮಲಾ ಹ್ಯಾರೀಸ್ ಅವರನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಪ್ರಚಾರಕ್ಕೆ ಹೋದ ಕಡೆಯಲ್ಲಿ ಜನರಿಗೆ ಮನವಿ ಮಾಡುತ್ತಿದ್ದಾರೆ.
ದಿನದಿಂದ ದಿನಕ್ಕೆ ಕಮಲಾ ಹ್ಯಾರಿಸ್ ಅವರಿಗೆ ಸಿಗುತ್ತಿರುವ ಬೆಂಬಲ ಮತ್ತು ಸಹಕಾರ ನೋಡಿದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಅವರನ್ನು ಕಂಗಾಲಾಗುವಂತೆ ಮಾಡಿದೆ.
ನವಂಬರ್ ೫ ರಂದು ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಆರೋಪ ಪ್ರತ್ಯಾರೋಪ ನಡೆಯುತ್ತಿದೆ.