ಮುಳುಗಿದ ನೌಕೆ,೬ ಮಂದಿ ಕಾಣೆ
ಲಂಡನ್, ಆ.೨೦-ಇಟಾಲಿಯನ್ ದ್ವೀಪ ಸಿಸಿಲಿಯ ಕರಾವಳಿಯಲ್ಲಿ ಐಷಾರಾಮಿ ವಿಹಾರ ನೌಕೆ ಮುಳುಗಿದ ಪರಿಣಾಮ ಇಂಗ್ಲೆಂಡ್‌ನ ಟೆಕ್ ಉದ್ಯಮಿ, ಅವರ ಪುತ್ರಿ ಸೇರಿದಂತೆ ೬ ಮಂದಿ ಕಾಣೆಯಾಗಿರುವ ಘಟನೆ ನಡೆದಿದೆ.
ವಿಹಾರ ನೌಕೆ ಸಮುದ್ರದಲ್ಲಿ ಮುಳುಗಿದ ಪರಿಣಾಮ ಕಾಣೆಯಾದ ಆರು ಜನರಲ್ಲಿ ಬ್ರಿಟಿಷ್ ಟೆಕ್ ಉದ್ಯಮಿ ಮೈಕ್ ಲಿಂಚ್ ಮತ್ತು ಅವರ ೧೮ ವರ್ಷದ ಮಗಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಬ್ರಿಟಿಷ್ ಬಿಲ್ ಗೇಟ್ಸ್” ಎಂದು ಹೆಸರು ವಾಸಿಯಾಗಿದ್ದ ಮೈಕ್ ಲಿಂಚ್, ಸಾಫ್ಟ್‌ವೇರ್ ಕಂಪನಿ ಸ್ಥಾಪಿಸಿ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ಟೆಕ್ ದೈತ್ಯ ಹೆವ್ಲೆಟ್-ಪ್ಯಾಕರ್ಡ್ ಅನ್ನು ೧೧ ಶತಕೋಟಿ ಬಿಲಿಯನ್ ಡಾಲರ್ ಮೊತ್ತಕ್ಕೆ ಖರೀದಿ ಮಾಡಿದ್ದರು ಎನ್ನಲಾಗಿದೆ
೧೫ ಮಂದಿ ರಕ್ಷಣೆ:
೫೬ ಮೀ (೧೮೩ ಅಡಿ) ಹಡಗಿನಲ್ಲಿ ಬ್ರಿಟಿಷ್, ಅಮೇರಿಕನ್ ಮತ್ತು ಕೆನಡಾದ ಪ್ರಜೆಗಳು ಸೇರಿದಂತೆ ೨೨ ಜನರು ಇದ್ದರು. ಒಂದು ವರ್ಷದ ಬ್ರಿಟಿಷ್ ಬಾಲಕಿ ಸೇರಿದಂತೆ ಹದಿನೈದು ಜನರನ್ನು ರಕ್ಷಿಸಲಾಗಿದೆ.
ಉಳಿದವರಿಗಾಗಿ ಹುಡುಕಾಟ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಯೆಸಿಯನ್ ಎಂಬ ಹೆಸರಿನ ವಿಹಾರ ನೌಕೆ ರಾತ್ರಿಯಿಡೀ ಭಾರೀ ಚಂಡಮಾರುತವನ್ನು ಎದುರಿಸಿದ ನಂತರ ಸ್ಥಳೀಯ ಸಮಯ ಮುಂಜಾನೆ ಗಂಟೆಗೆ ಮುಳುಗಿದೆ ಎಂದು ಸ್ಥಳೀಯ ಮಾಧ್ಯಮವು ವರದಿ ಮಾಡಿದೆ,
ಚಂಡಮಾರುತ ವಿಹಾರ ನೌಕೆಗೆ ಅಪ್ಪಳಿಸಿದ ಪರಿಣಾಮ ಅದು ತಲೆಕಳೆಗಾಗಿ ನೀರಿನಲ್ಲಿ ಮುಳುಗಿದೆ ಎಂದು ವಿಹಾರ ನೌಕಯೆಲ್ಲಿ ಬದುಕುಳಿದ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಬಾರಿ ಚಂಡಮಾರುತದ ಪರಿಣಾಮ ವಿಹಾರ ನೌಕೆ ಮಾಸ್ಟ್ ಮುರಿದುಹೋಯಿತು ಮತ್ತು ಹಡಗು ತನ್ನ ಸಮತೋಲನವನ್ನು ಕಳೆದುಕೊಂಡಿತು ಮತ್ತು ಸಿಸಿಲಿಯನ್ ರಾಜಧಾನಿ ಪಲೆರ್ಮೊ ಬಳಿಯ ಪೊರ್ಟಿಸೆಲ್ಲೋ ಗ್ರಾಮ ಕರಾವಳಿಯಲ್ಲಿ ಮುಳುಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಲಪ್ರವಾಹ, ಸುಂಟರಗಾಳಿ ಯಂತೆಯೇ ಇರುತ್ತದೆ ಮತ್ತು ಸಾಗರಗಳು, ಸಮುದ್ರಗಳು ಅಥವಾ ದೊಡ್ಡ ಸರೋವರಗಳ ಮೇಲೆ ರಚಿಸಬಹುದು.ಮುಳುಗುಗಾರರು ನೀರಿನ ಮೇಲ್ಮೈಯಿಂದ ೫೦ ಮೀಟರ್ ಕೆಳಗೆ ಅವಶೇಷಗಳನ್ನು ಗುರುತಿಸಿದ್ದಾರೆ ಮತ್ತು ಕಾಣೆಯಾದವರಿಗಾಗಿ ಹುಡುಕುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ
ಸಿಸಿಲಿಯ ಸಿವಿಲ್ ಪೊ?ರಟೆಕ್ಷನ್ ಏಜೆನ್ಸಿಯ ಡೈರೆಕ್ಟರ್ ಜನರಲ್ ಸಾಲ್ವಟೋರ್ ಕೊಸಿನಾ ಅವರು ಲಿಂಚ್, ಅವರ ಮಗಳು ಹನ್ನಾ ಲಿಂಚ್ ಮತ್ತು ವಿಹಾರ ನೌಕೆಯ ಬಾಣಸಿಗರು ಕಾಣೆಯಾದವರಲ್ಲಿದ್ದಾರೆ ಎಂದು ಹೇಳಿದ್ದಾರೆ