ಟ್ರಂಪ್ ಸೋಲಿಗೆ ಹ್ಯಾರಿಸ್ ಪ್ರತಿಜ್ಞೆ
ಚಿಕಾಗೋ,ಆ.೨೦- ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕಾದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸುವುದಾಗಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಪ್ರತಿಜ್ಞೆ ಮಾಡಿದ್ದಾರೆ.
ಕಮಲಾ ಹ್ಯಾರೀಸ್ ಅವರೆ ಪ್ರತಿಜ್ಞೆಗೆ ದಿನದಿಂದ ದಿನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹಾಲಿ ಅಧ್ಯಕ್ಷ ಜೋಬೈಡೆನ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಸೇರಿದಂತೆ ಅಮೇರಿಕಾದ ಅನೇಕ ಡೆಮಾಕ್ರಟಿಕ್‌ಗಳು ಕಮಲಾ ಹ್ಯಾರಿಸ್ ಬೆಂಬಲಕ್ಕೆ ನಿಂತಿದ್ದಾರೆ.
ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ನವಂಬರ್ ೫ ರಂದು ನಡೆಯುಲಿದ್ದು ಮುಂದಿನ ಅಧ್ಯಕ್ಷರು ಯಾರಾಗಲಿದ್ದಾರೆ ಎನ್ನುವ ತೀವ್ರ ಕುತೂಹಲ ಕೆರಳಿಸಿದೆ. ಈ ನಡುವೆ ಇಬ್ಬರು ಆಭ್ಯರ್ಥಿಗಳ ನಡುವೆ ಅಮೆರಿಕಾದ ಅಧ್ಯಕ್ಷ ಗಾದಿ ಹಿಡಿಯಲು ಪರಸ್ಪರ ಆರೋಪ ಪ್ರತ್ಯಾರೋಪ ನಡದಿದೆ.
ಚಿಕಾಗೋದಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಕಮಲಾ ಹ್ಯಾರಿಸ್ ಅಮೆರಿಕಾವನ್ನು ಜಾಗತಿಕವಾಗಿ ಮತ್ತಷ್ಟು ಪ್ರಬಲ ದೇಶವನ್ನಾಗಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಅಮೆರಿಕಾದ ಎಲ್ಲ ಜನರ ಸಹಕಾರ ಮತ್ತು ಬೆಂಬಲ ಬೇಕು ಎಂದು ಅವರು ಮನವಿ ಮಾಡಿದ್ದಾರೆ.
“ನಾವು ಪ್ರೀತಿಸುವ ಆದರ್ಶಗಳಿಗಾಗಿ ಹೋರಾಡೋಣ ಮತ್ತು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳೋಣ, ನಾವು ಹೋರಾಡಿದಾಗ ನಾವು ಗೆಲ್ಲುತ್ತೇವೆ ಎಂದು ಅಸಂಖ್ಯಾತ ಬೆಂಬಲಿಗರು ಮತ್ತು ಜನರನ್ನುದ್ದೇಶಿಸಿ ಅವರು ಈ ವಿಷಯ ತಿಳಿಸುತ್ತಿದ್ದಂತೆ ಸೇರಿದ್ದ ಸಾವಿರಾರ ಜನರು ಕರಡಾತನದ ಮೂಲಕ ಬೆಂಬಲ ಸೂಚಿಸಿದರು.
ಚಿಕಾಗೋದಲ್ಲಿ ನಾಲ್ಕು ದಿನಗಳ ಕಾರ್ಯಕ್ರಮದ ಮೊದಲ ರಾತ್ರಿ ಸೋಮವಾರದಂದು ಮುಖ್ಯ ಭಾಷಣಕಾರರಾದ ಅಧ್ಯಕ್ಷ ಜೋ ಬೈಡೆನ್,.ಹಿಲರಿ ಕ್ಲಿಂಟನ್ ಅವರೊಂದಿಗೆ ಪ್ರಚಾರದಲ್ಲಿ ಭಾಗಿಯಾಗಿ ಈ ಬಾರಿಯ ಅಮೆರಿಕಾ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚು ಮಹತ್ವ ಪಡೆದಿದೆ ಎಂದು ಹೇಳಿದ್ದಾರೆ.
ಅಮೆರಿಕಾದ ಮೊದಲ ಕರಿಯ ಅಧ್ಯಕ್ಷ ಎನ್ನುವ ಶ್ರೇಯಕ್ಕೆ ಪಾತ್ರರಾಗಿರುವ ಬರಾಕ್ ಒಬಾಮಾ ಅವರಿಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಜೋ ಬೈಡನ್ ಅವರು ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಅವರನ್ನು ಗೆಲ್ಲಿಸಿಕೊಳ್ಳಲು ಇನ್ನಿಲ್ಲದ ಎಲ್ಲಾ ಪ್ರಯತ್ನ ನಡೆಸಿದ್ದಾರೆ.