ಬಿಜೆಪಿಯತ್ತ ಮುಖ ಮಾಡಿದ ಚಂಪೈ
ನವದೆಹಲಿ, ಆ. ೧೮- ಇಂದು ದೆಹಲಿಗೆ ಆಗಮಿಸಿರುವ ಜೆ.ಎಂಎಂ. ನಾಯಕ ಚಂಪೈ ಸೊರೆನ್ ಮೂವರು ಶಾಸಕರೊಂದಿಗೆ ಬಿಜೆಪಿಯತ್ತ ಮುಖ ಮಾಡಿದ್ದಾರೆ.
ಮನಿಲ್ಯಾಂಡರಿಂಗ್ ಪ್ರಕರಣದಲ್ಲಿ ಅವರ ಸಹೋದರ ಹೇಮಂತ್ ಸೊರೆನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ ನಂತರ ಮುಖ್ಯಮಂತ್ರಿ ಕಚೇರಿಯ ಆಡಳಿತವನ್ನು ವಹಿಸಿಕೊಂಡಿದ್ದ ಚಂಪೈ ಸೊರೆನ್ ಹೇಮಂತ್ ಅವರು ಜಾಮೀನಿನ ಮೇಲೆ ಹೊರ ಬಂದು ಮತ್ತೇ ಸಿಎಂ ಆದ ಮೇಲೆ ಚಂಪೈ ಸಿಎಂ ಕಚೇರಿಯಿಂದ ಹೊರನಡೆದಿದ್ದರು.
ಚಂಪೈ ಸೊರೆನ್ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎನ್ನುವ ವದಂತಿಗಳ ನಡುವೆ ಇಂದು ದೆಹಲಿಗೆ ತಮ್ಮ ಮೂವರು ಶಾಸಕರೊಂದಿಗೆ ಆಗಮಿಸಿದ್ದಾರೆ. ಬಿಜೆಪಿಯ ಜೆಎಂಎಂ ಮಾಜಿ ಶಾಸಕ ಲೊಬೆನ್ ಹೆಂಬ್ರೂಮ್ ಅವರ ಮೂಲಕ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಕಳೆದರೆಡು ದಿನಗಳಿಂದ ಚಂಪೈ ಬಿಜೆಪಿ ಸೇರ್ಪಡೆಯಾಗುತ್ತಾರೆ ಎನ್ನುವ ವದಂತಿಗಳಿಗೆ ಇಂದು ತೆರೆ ಬೀಳಲಿದೆ. ಜಾರ್ಖಂಡ್ ಮುಕ್ತಿ ಮೋರ್ಚಾ ಮಾಜಿ ಶಾಸಕ ಲೊಬಿನ್, ಹೆಂಬ್ರೂಮ್ ಸಹ ಸೊರೆನ್ ಅವರೊಂದಿಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದ್ದು, ಮುಖ್ಯಮಂತ್ರಿ ಕಚೇರಿಯಿಂದ ಅವರನ್ನು ಹೊರಹಾಕಿರುವುದೇ ಬಿಜೆಪಿ ಸೇರ್ಪಡೆಗೆ ಕಾರಣ ಎನ್ನಲಾಗಿದೆ.