ರಕ್ತದಾನ ಶಿಬಿರಕ್ಕೆ ಚಾಲನೆ
ಕೆ.ಆರ್.ಪುರ, ಆ.೧೮- ಮೆಗಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಅಖಿಲ ಕರ್ನಾಟಕ ಚಿರಂಜೀವಿ ಯುವಕರ ಸಂಘ ಕ್ಷೇತ್ರದ ನೆಲ್ಲೂರುಪುರದಲ್ಲಿ ರಕ್ತದಾನ ಶಿಬಿರವನ್ನು ಸಂಘದ ರಾಜ್ಯ ಉಪಾಧ್ಯಕ್ಷರಾದ ರಾಮಲಕ್ಷ್ಮಣ್ ಅವರು ಉದ್ಘಾಟಿಸಿದರು.
ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ರಾಮಲಕ್ಷ್ಮಣ್ ಅವರು ರಕ್ತದಾನ ಮಾಡುವುದರಿಂದ ತುರ್ತುಪರಿಸ್ಥಿತಿ ರಕ್ತದಾನ ಪೂರೈಕೆಗೆ ಸಹಕಾರಿಯಾಗಲಿದೆ ಎಂದು ನುಡಿದರು. ನೆಚ್ಚಿನ ನಟನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರತಿ ವರ್ಷ ರಕ್ತದಾನ ಶಿಬಿರ ಹಲವು ಜನಪರ ಸೇವೆಗಳನ್ನು ಮಾಡಿಕೊಂಡು ಬರುತ್ತಿದ್ದೇವೆ.
ಈ ಬಾರಿಯ ರಕ್ತದಾನ ಶಿಬಿರದಲ್ಲಿ ೫೦ ಕ್ಕು ಹೆಚ್ಚು ಮಂದಿ ರಕ್ತದಾನ ಮಾಡಿದ್ದಾರೆ,ಸಂಜೆ ವೇಳೆಗ ಮತ್ತಷ್ಟು ಮಂದಿ ರಕ್ತದಾನ ಮಾಡಲಿದ್ದಾರೆ ಎಂದು ತಿಳಿಸಿದರು.
ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಅಡ್ಡಪರಿಣಾಗಳಾಗುವುದಿಲ್ಲ, ದೇಹದಲ್ಲಿ ಹೊಸ ರಕ್ತ ಉತ್ಪತಿಯಾಗಿ ಇನ್ನಷ್ಟು ಆರೋಗ್ಯವಾಗಿರಬಹುದು ಎಂದು ಹೇಳಿದರು. ಶಾಸಕ ಬೈರತಿ ಬಸವರಾಜರವರ ಆಶೀರ್ವಾದದೊಂದಿಗೆ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು ಕಾರಣಾಂತರಗಳಿಂದ ಅವರು ಕಾರ್ಯಕ್ರಮಕ್ಕೆ ಬರಲು ಆಗಲಿಲ್ಲ ಎಂದು ಹೇಳಿದರು.
ಯುವಕರುಹೆಚ್ಚಾಗಿ ರಕ್ತದಾನದಲ್ಲಿ ಪಾಲ್ಗೊಂಡು ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ನಾಗೇಂದ್ರ, ಮಂಜು ಪೂಜಪ್ಪ, ಶಿವತೇಜ್, ಬಾಲರಾಜ್, ಚಿರಂಜೀವಿ, ಹಾಗೂ ರಾಮಲಕ್ಷ್ಮಣ್ ಯುವಕರ ತಂಡದವರು ಉಪಸ್ಥಿತರಿದ್ದರು.