ದೌರ್ಜನ್ಯ ಖಂಡಿಸಿ ಸೇಂಟ್ ಜಾನ್ಸ್ ವೈದ್ಯರ ಪ್ರತಿಭಟನೆ
ಬೆಂಗಳೂರು.ಆ.೧೮- ಕಳೆದ ಕೆಲವು ದಿನಗಳಿಂದ ಕೋಲ್ಕತ್ತಾದಲ್ಲಿ ವೃತ್ತಿಪರ ವೈದ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ನಗರದ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರತಿಭಟನೆ ನಡೆಯಿತು.
ವೈದ್ಯಕೀಯ ಕಾಲೇಜಿನ ೧೫೦೦ ವಿದ್ಯಾರ್ಥಿಗಳು, ವೈದ್ಯರು ಮತ್ತು ದಾದಿಯರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಸಾವನಪ್ಪಿದ ವೈದ್ಯೆಗೆ ನ್ಯಾಯ ಸಿಗಬೇಕು. ವೃತ್ತಿಪರ ವೈದ್ಯರಿಗೆ ಭದ್ರತೆ ನೀಡಬೇಕು. ಭವಿಷ್ಯದಲ್ಲಿ ಇಂಥ ಘಟನೆ ಮರುಕಳಿಸಬಾರದು ಎಂದು ಬೇಡಿಕೆ ಮುಂದಿಟ್ಟರು.
ಸೇಂಟ್ ಜಾನ್ಸ್‌ನ ರೆವರೆಂಡ್ ಡಾ. ಜೇಸುಡೊಸ್ ರಾಜಾಮ್‌ನಿಕಾಮ್, ಸಹಾಯಕ ನಿರ್ದೇಶಕ ರೆವರೆಂಡ್ ಡಾ. ಜೇಮ್ಸ್ ಚಾರ್ಲ್ಸ್ ಡೇವಿಸ್, ಡೀನ್ ಡಾ. ಜಾರ್ಜ್ ಡಿ ಸೋಜಾ iತ್ತು ವೈದ್ಯಕೀಯ ಸೇವೆಯ ಡಾ. ಅರವಿಂದ್ ಕಸ್ತೂರಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಳಗ್ಗೆ ೬ರಿಂದ ಸಂಜೆ ೬ರವರೆಗ ಒಪಿಡಿ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ತುರ್ತು ಚಿಕಿತ್ಸಾ ವಿಭಾಗವನ್ನು ತೆರಯಲಾಗಿತ್ತು.